ಇಸ್ರೇಲ್‌-ಹಮಾಸ್‌ ಯುದ್ದ ನಿಲ್ಲಿಸೋಕೆ ಮುಂದಾದ್ರಾ ಬ್ಲಿಂಕನ್‌?

masthmagaa.com:

ಗಾಜಾದಲ್ಲಿ ಇಸ್ರೇಲ್ ದಾಳಿ ಜೋರಾಗಿದ್ರೆ ಅತ್ತ ಅಮೆರಿಕನ್‌ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಮತ್ತೆ ಯುದ್ದ ನಿಲ್ಲಿಸೋ ಜಪ ಮಾಡಿದ್ದಾರೆ. ತನ್ನ‌ ಐದು ದಿನಗಳ ಮಿಡ್ಲ್‌ ಈಸ್ಟ್ ದೇಶಗಳ ಪ್ರವಾಸದಲ್ಲಿರೋ ಬ್ಲಿಂಕನ್‌,‌ “ಸದ್ಯ ಇಸ್ರೇಲ್‌-ಹಮಾಸ್‌ ಕಾಳಗದಿಂದ ಗಾಜಾದಲ್ಲಿ ಭಾರೀ ಸಾವು ನೋವು ಉಂಟಾಗಿದೆ. ಈ ಯುದ್ದ ಸಾಕಷ್ಟು ಹಾನಿ ಮಾಡಿದೆ. ಹೀಗಾಗಿ ಗಾಜಾ ಮೇಲಿನ ದಾಳಿ ನಿಲ್ಲಬೇಕು, ಹಾಗೂ ಪ್ಯಾಲಸ್ತೀನ್‌ ನಾಗರಿಕರಿಗೆ ತವರಿಗೆ ಮರಳಲು ಅವಕಾಶ ನೀಡುವಂತೆ ಇಸ್ರೇಲ್‌ ಅಧಿಕಾರಿಗಳೊಂದಿಗೆ ಮಾತಾಡ್ತೀನಿ” ಅಂತ ಬ್ಲಿಂಕನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply