ಚೀನಾಗೂ ಕಾಂಗ್ರೆಸ್‌ಗೂ ನಂಟಿದೆ: ಅನುರಾಗ್‌ ಠಾಕೂರ್‌

masthmagaa.com:

‘ರಾಹುಲ್ ಜಿ ಅವರ ನಕಲಿ ‘ಮೊಹಬ್ಬತ್ ಕಿ ದುಕಾನ್’ನಲ್ಲಿ ಚೀನಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ’ ಅಂತ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ. ಅಮೆರಿಕದ ಪ್ರಖ್ಯಾತ ಸುದ್ದಿಸಂಸ್ಥೆ ನ್ಯೂಯಾರ್ಕ್‌ ಟೈಮ್ಸ್‌ ತನಿಖಾ ವರದಿಯೊಂದನ್ನ ಪಬ್ಲಿಷ್‌ ಮಾಡಿದ್ದು ಅದ್ರಲ್ಲಿ ಚೀನಾ ಬೇರೆ ದೇಶಗಳಲ್ಲಿ ತನ್ನ ಪರ ಅಜೆಂಡಾಗಳನ್ನ ಸೃಷ್ಟಿಸಲು ಸುಳ್ಳು ಸುದ್ದಿ ಸಂಸ್ಥೆಗಳಿಗೆ ಹಣ ನೀಡ್ತಿದೆ ಅಂತ ವರದಿ ಮಾಡಿದೆ. ನ್ಯೂಯಾರ್ಕ್‌ ಟೈಮ್ಸ್‌ ವರದಿ ಬೆನ್ನಲ್ಲೇ ಅನುರಾಗ್‌ ಠಾಕೂರ್‌ ಸುದ್ದಿಘೋಷ್ಠಿ ನಡೆಸಿದ್ದು, ಈ ನ್ಯೂಸ್ ಪೋರ್ಟಲ್ ಹಿಂದೆ ‘ವಿದೇಶಿ ಕೈಗಳು’ ಇರೋದ್ರ ಬಗ್ಗೆ 2021ರಲ್ಲಿ ಬಹಿರಂಗವಾಗಿತ್ತು. ಆಗ ಕಾಂಗ್ರೆಸ್‌ ನ್ಯೂಸ್‌ ಪೋರ್ಟಲ್‌ ಪರವಾಗಿ ವಾದಿಸಿತ್ತು. ಚೀನಾ, ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಮತ್ತು ಕಾಂಗ್ರೆಸ್ ಒಂದಕ್ಕೊಂದು ಸಂಬಂಧ ಹೊಂದಿವೆ ಅಂತ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply