AI ರೇಸ್‌ಗೆ ಆಪಲ್‌ ಎಂಟ್ರಿ! ಏನಿದರ ಸ್ಪೆಶಾಲಿಟಿ?

masthmagaa.com:

ಒಪನ್‌AIನ ಚಾಟ್‌GPTಗೆ ಸಾಲು ಸಾಲು ಕಾಂಪಿಟೇಶನ್‌ಗಳು ಹುಟ್ಟಿಕೊಳ್ತಿವೆ. ಡಿಸೆಂಬರ್‌ 7 ರಂದು ಗೂಗಲ್‌ ಸಂಸ್ಥೆ ತನ್ನ ನೂತನ AI ಜೆಮಿನಿಯನ್ನ ಲಾಂಚ್‌ ಮಾಡಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈ AI ರೇಸ್‌ಗೆ ಮತ್ತೊಂದು ಟೆಕ್‌ ದಿಗ್ಗದ ಕಂಪನಿ ಕಾಲಿಡೋ ಸೂಚನೆ ನೀಡಿದೆ. ಆಪಲ್‌ ಕಂಪನಿ MLX ಅನ್ನೋ ಮಷಿನ್‌ ಲರ್ನಿಂಗ್‌ ಫ್ರೇಮ್‌ವರ್ಕನ್ನ ರಿಲೀಸ್‌ ಮಾಡಿದೆ. ಸದ್ಯಕ್ಕೆ ಇದು ಆಪಲ್‌ನ ಡೆವಲಪರ್‌ಗಳಿಗೆ ಲಭ್ಯವಿದ್ದು ಟೆಸ್ಟಿಂಗ್‌ ಹಂತದಲ್ಲಿದೆ. ಚಾಟ್‌ GPT, ಬಾರ್ಡ್‌, ಜೆಮಿನಿ ಮುಂತಾದ AI ಗಳು ಜೆನರೇಟಿವ್‌ AI ಗಳಾಗಿವೆ. ಅಂದ್ರೆ ಅವಕ್ಕೆ ಈಗಾಗ್ಲೆ ಫೀಡ್‌ ಮಾಡಿರೋ ಸಂಪೂರ್ಣ ಮಾಹಿತಿಯಿಂದ ಕೆಲಸ ಮಾಡ್ತವೆ. ಆದ್ರೆ ಆಪಲ್‌ನ MLX ಫ್ರೇಮ್‌ವರ್ಕ್‌ ಮಷಿನ್‌ ಲರ್ನಿಂಗ್‌ ಟೂಲ್‌ ಆಗಿದೆ. ಅಂದ್ರೆ ಮಾನವನ ಮೆದುಳಿನಂತೆ ತನಗೆ ಸಿಗೋ ಇನ್‌ಪುಟ್‌ ಇಂದ ಚೂರ್‌ ಚೂರೆ ಕಲಿತು ಕೆಲಸ ಮಾಡುತ್ತೆ.

-masthmagaa.com

Contact Us for Advertisement

Leave a Reply