ಭಾರತ ಸೇನೆ ಯುದ್ಧಕ್ಕೆ ರೆಡಿ ಇರಬೇಕು..! ಮಹತ್ವದ ಸೂಚನೆ ಕೊಟ್ಟ ರಕ್ಷಣಾ ಸಚಿವರು!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತ ಸರ್ಕಾರ ಸೇನೆಗೆ ಒಂದು ಪ್ರಮುಖ ಸಲಹೆ ಕೊಟ್ಟಿದೆ. ಅನಿರೀಕ್ಷಿತ ದಾಳಿಗಳು ಯಾವಾಗಾದ್ರು ಆಗ್ಬೋದು. ಎಲ್ಲದಕ್ಕೂ ಪ್ರಿಪೇರ್‌ ಆಗಿರೋದು ಒಳ್ಳೇದು ಅಂತ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ. ಬುಧವಾರ ದೆಹಲಿಯಲ್ಲಿ ನಡೆದ ಆರ್ಮಿ ಕಮ್ಯಾಂಡರ್ಸ್‌ ಕಾನ್ಫರೆನ್ಸ್‌ನಲ್ಲಿ ರಾಜನಾಥ್‌ ಸಿಂಗ್ ಮಾತನಾಡಿದ್ರು. ಈ ವೇಳೆ LAC ಗಡಿ ವಿವಾದ ಸೇರಿದಂತೆ ,ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆಯೂ ಟಾಪ್‌ ಕಮ್ಯಾಂಡರ್‌ಗಳೊಂದಿಗೆ ಡಿಸ್ಕಸ್‌ ಮಾಡಿದ್ರು. ಈ ವೇಳೆ ಅಸಾಂಪ್ರಾದಾಯಿಕ ಯುದ್ಧನೀತಿಗಳು ಇತ್ತೀಚಿನ ಯುದ್ದಗಳಲ್ಲಿ ಕಾಮನ್‌ ಆಗಿದ್ದಾವೆ. ಸಶಸ್ತ್ರ ಪಡೆಗಳು ತಮ್ಮ ಪ್ಲಾನ್‌ ಮಾಡುವಾಗ ಇದನ್ನ ಮೈಂಡ್‌ನಲ್ಲಿ ಇಟ್ಕೊಂಡಿರ್ಬೇಕು. ಪ್ರಪಂಚದಲ್ಲಿ ನಡೀತಿರೋ ಘಟನೆಗಳನ್ನ ನೋಡಿ ನಾವು ಕಲಿತಾ ಇರ್ಬೇಕು. ಪ್ಲಾನಿಂಗ್‌, ಸ್ಟ್ರಾಟಜಿ, ಪ್ರಿಪರೇಶನ್‌ ಮಾಡುವಾಗ Expect the Unexpected ಫಾರ್ಮುಲಾ ನಾ ಫಾಲೋ ಮಾಡ್ಬೇಕು. ಯುದ್ಧಕ್ಕೆ ಸಿದ್ಧತೆ ಮಾಡ್ಕೊಳೋದು ಒಂದು ನಿರಂತರ ಪ್ರಕ್ರಿಯೆ. ನಮ್ಮ ಯುದ್ಧ ತಂತ್ರಗಳನ್ನ, ಟೆಕ್ನಾಲಜಿಯನ್ನ ಕಾಲಕಾಲಕ್ಕೆ ಅಪ್‌ಡೇಟ್‌ ಮಾಡುತ್ತಲೇ ಇರ್ಬೇಕು”ಅಂತ ರಾಜನಾಥ್‌ಸಿಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply