ಪಾಕಿಸ್ತಾನ ಗೂಢಾಚಾರಿಗೆ ಸೇನಾ ರಹಸ್ಯ ಮಾಹಿತಿ ನೀಡಿದ್ದ ಯೋಧನನ್ನು ಬಂಧಿಸಿದ ಭಾರತೀಯ ಸೇನೆ!

masthmagaa.com:

ಭಾರತೀಯ ಯೋಧನೊಬ್ಬ ದೇಶಕ್ಕೆ ಸಂಬಂಧಪಟ್ಟಂತ ಮಾಹಿತಿಗಳನ್ನ ಪಾಕಿಸ್ತಾನಿ ಗೂಢಚಾರರಿಗೆ ರವಾನೆ ಮಾಡಿರೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ದೆಹಲಿಯಲ್ಲಿರೋ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾದ ಐಎಸ್‌ಐ ಏಜೆಂಟ್‌ಗೆ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಯೋಧ ಈಗ ಸಿಕ್ಕಿಬಿದ್ದಿದ್ದಾನೆ. ಚೀನಾ ಮತ್ತು ಭಾರತ ಗಡಿಯಲ್ಲಿ ನಿಯೋಜಿಸಲಾಗಿದ್ದ ಆಲಿಮ್‌ ಖಾನ್‌ ಅನ್ನೋ ಯೋಧ ಇಲ್ಲಿನ ಸೇನಾ ನೆಲೆಯ ರಹಸ್ಯ ಮಾಹಿತಿಯನ್ನ ಪಾಕಿಸ್ತಾನ ಏಜೆಂಟ್‌ಗೆ ನೀಡಿದ್ದಾನೆ. ಇದಕ್ಕಾಗಿ ಪಾಕಿಸ್ತಾನ ರಾಯಭಾರ ಅಧಿಕಾರಿ ಈ ಆಲಿಮ್‌ ಖಾನ್‌ ಅನ್ನೋ ಯೋಧನಿಗೆ 15 ಸಾವಿರ ರೂಪಾಯಿ ನೀಡಿದ್ದ ಅಂತ ತಿಳಿದು ಬಂದಿದೆ. ಈಗಾಗಲೇ ಯೋಧನನ್ನ ಬಂಧಿಸಲಾಗಿದ್ದು, ಸೇನಾ ನಿಯಮಗಳಂತೆ ಆರೋಪಿ ವಿರುದ್ಧ ವಿಚಾರಣೆ ನಡೆಸಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಯೋಧನ ಬಳಿ ತುಂಬಾ ರಹಸ್ಯವಾದ ಮಾಹಿತಿ ಏನು ಇರ್ಲಿಲ್ಲ. ಆದ್ರೂ ಸೇನೆಯಲ್ಲಿ ಇಂತಹ ಕೃತ್ಯಗಳಿಗೆ ಶೂನ್ಯ ಸಹಿಷ್ಣುತೆ ಇದೆ. ಅಂದ್ರೆ ಈ ರೀತಿಯೆಲ್ಲಾ ಮಾಡಲೇ ಬಾರದು. ಹೀಗಾಗಿ ಆತನಿಗೆ ಸೂಕ್ತ ಶಿಕ್ಷೆಯನ್ನ ನೀಡಲಾಗುತ್ತೆ ಅಂತ ಆರ್ಮಿ ಮೂಲಗಳು ಹೇಳಿವೆ. ಅಷ್ಟೆ ಅಲ್ದೆ ಆರೋಪಿ ಚೀನಾ ಗಡಿಯಲ್ಲಿ ನಿಗಾವಹಿಸೋ ಉಪಗ್ರಹದ ಸ್ಥಳ ಹಾಗೂ ಕಣ್ಗಾವಲು ರಾಡಾರ್‌ಗಳು ಸೇರಿದಂತೆ ಇತರ ಉಪಕರಣಗಳ ಸ್ಥಳವನ್ನ ಪ್ರವೇಶಿಸೋಕೆ ಪ್ರಯತ್ನಿಸಿದ್ದಾನೆ ಆದ್ರೆ ಯಶಸ್ವಿಯಾಗಿಲ್ಲ ಅಂತ ತಿಳಿದು ಬಂದಿದೆ. ಇನ್ನು ಈ ಕಡೆ ಅಕ್ರಮವಾಗಿ ಭಾರತ-ನೇಪಾಳ ಗಡಿ ಪ್ರವೇಶ ಮಾಡ್ತಿದ್ದ ಚೀನಾದ ಪ್ರಜೆಯೊಬ್ಬನನ್ನ ಅರೆಸ್ಟ್‌ ಮಾಡಿರೋದಾಗಿ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply