ಸೈಬರ್‌ ಯುದ್ದಕ್ಕೆ ತಯಾರಿ ಆಗ್ತಿದೆ ಭಾರತ! ಚೀನಾ- ಪಾಕ್‌ಗೆ ಕೌಂಟರ್‌ ಕೊಡೋದಕ್ಕೆ ಹೊಸ ಯೂನಿಟ್‌ ನೇಮಕ!

masthmagaa.com:

ಜಾಗತಿಕವಾಗಿ ಸೈಬರ್‌ ಯುದ್ದದ ಭೀತಿ ಜೋರಾಗ್ತಿರೋ ಹೊತ್ತಲ್ಲೇ ಇದೀಗ ಭಾರತ ಕೂಡ ಹೈ ಅಲರ್ಟ್‌ ಆಗಿದೆ. ಭಾರತವನ್ನ ಗುರಿಯಾಗಿಸಿಕೊಂಡು ಚೀನಾ ಹಾಗೂ ಪಾಕಿಸ್ತಾನದ ಸೇನೆ ಸೈಬರ್‌ ದಾಳಿಗೆ ಸಂಚು ರೂಪಿಸ್ತಿವೆ ಅನ್ನೋ ಮಾಹಿತಿ ಇರೋ ಹೊತ್ತಲ್ಲೇ, ಅವರಿಬ್ರಿಗೂ ಕೌಂಟರ್‌ ಮಾಡೋದಕ್ಕೆ ಭಾರತವೂ ಈಗ ಹೊಸದಾಗಿ ತರಬೇತಿ ಪಡೆದ ವಿಶೇಷ ಸೈಬರ್‌ ಯೂನಿಟ್‌ನ್ನ ನಿಯೋಜನೆ ಮಾಡಿದೆ. ಸೈಬರ್‌ ಯುದ್ದಕ್ಕೆ ತಯಾರಿ ಆಗುವ ಕಾರ್ಯಕ್ರಮದ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವಾರ ದೇಶದ ರಕ್ಷಣೆಗೆ ಸಂಬಂಧಪಟ್ಟಂತೆ, ಅದ್ರಲ್ಲೂ ಮುಖ್ಯವಾಗಿ ಸೈಬರ್‌ ಯುದ್ದದ ತಯಾರಿ ಕುರಿತಂತೆ ಆರ್ಮಿ ಕಮಾಂಡರ್ಸ್‌ ಕಾನ್ಫರೆನ್ಸ್‌ ಹಮ್ಮಿಕೊಳ್ಳಲಾಗಿತ್ತು. ಮೂರು ಪಡೆಗಳ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾಣ್‌ ಈ ಸಭೆಯ ನೇತೃತ್ವ ವಹಿಸಿದ್ರು. ಈ ವೇಳೆ ಈ ಹೊಸ ಯೂನಿಟ್‌ಅನ್ನ ನಿಯೋಜನೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಸೇನೆಯ ನಡುವಿನ ಸಂವಹನ ನೆಟ್‌ವರ್ಕ್‌ಗಳನ್ನು ರಕ್ಷಿಸೋಕೆ, ಹಾಗೂ ಶತ್ರುಗಳಿಂದ ಬರುವ ಸೈಬರ್‌ ಬೆದರಿಕೆಗಳನ್ನ ಕೌಂಟರ್‌ ಮಾಡೋದಕ್ಕೆ ಈ ಹೊಸ ಯೂನಿಟ್‌ಅನ್ನ ನಿಯೋಜನೆ ಮಾಡಲಾಗಿದೆ. ಸೈಬರ್‌ ಯುದ್ದ ಅನ್ನೋದು ಆಧುನಿಕ ಯುದ್ದತಂತ್ರದ ಪ್ರಮುಖ ಭಾಗವಾಗಿದ್ದು ಭಾರತ ಕೂಡ ಅಪ್‌ಗ್ರೇಡ್‌ ಆಗಬೇಕು. ಹೀಗಾಗಿ ಈ ಹೊಸ ಯೂನಿಟ್‌ ಭಾರತದ ಸೈಬರ್‌ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದಹಾಗೆ ಸ್ನೇಹಿತರೇ ಶಸ್ತಾಸ್ತ್ರ ಯುದ್ದಕ್ಕಿಂತಲೂ ಈಗ ಸೈಬರ್‌ ಯುದ್ದ ತುಂಬಾ ಸದ್ದು ಮಾಡ್ತಿರೋ ಹೆಸರು. ವಿರೋಧಿಗಳ ವಿರುದ್ದ ಯಾವುದೇ ಶಸ್ತಾಸ್ತ್ರವನ್ನ ಬಳಸದೇ ಅವರ ಶಕ್ತಿ ಕುಗ್ಗಿಸೋದು ಇದರಿಂದ ಸಾಧ್ಯವಾಗುತ್ತೆ. ಸೇನೆಗೆ ಸಂಬಂಧಪಟ್ಟ ರಹಸ್ಯ ಮಾಹಿತಿಗಳನ್ನ ಕದಿಯೋದು, ಸೇನಾಧಿಕಾರಿಗಳನ್ನ ಹನಿಟ್ರಾಪ್‌ ಮಾಡೋದು, ಹಾಗೇ ಒಬ್ಬ ಸೇನಾಧಿಕಾರಿ ಇನ್ನೊಬ್ಬ ಅಧಿಕಾರಿ ಜೊತೆಗೆ ಏನ್‌ ಮಾತನಾಡಿದ್ದಾರೆ ಅಂತ ಕದ್ದಾಲಿಸೋದು ಹೀಗೆ ಅನೇಕ ರೂಪಗಳಲ್ಲಿ ವಿರೋಧಿಗಳ ಶಕ್ತಿ ಏನಿದೆ? ಅವರ ವೀಕ್ನೆಸ್‌ ಏನಿದೆ? ಎಲ್ಲವನ್ನೂ ತಿಳಿಯಲಾಗ್ತಿದೆ. ಯುಕ್ರೇನ್‌-ರಷ್ಯಾ ನಡುವೆ ಈ ರೀತಿ ಯುದ್ದ ಕೂಡ ಈಗ ಆಲ್ರೆಡಿ ನಡೀತಾ ಇದೆ. ಇವರಿಬ್ರ ಜೊತೆಗೆ ಉತ್ತರ ಕೊರಿಯಾ Vs ದಕ್ಷಿಣ ಕೊರಿಯಾ,ಅಮೆರಿಕ Vs ರಷ್ಯಾ, ಟರ್ಕಿ Vs ಗ್ರೀಸ್‌ ಇಸ್ರೇಲ್‌ Vs ಇರಾನ್‌ ಹೀಗೆ ಜಗತ್ತಲ್ಲಿರೋ ಎಲ್ಲಾ ದೇಶಗಳು ಒಬ್ರ ವಿರುದ್ದ ಮತ್ತೊಬ್ರು ಸೈಬರ್‌ ದಾಳಿ ಮಾಡ್ತಿದ್ದಾರೆ. ಇನ್ನು ಭಾರತ ಕೂಡ ಇಬ್ರು ಶತ್ರುಗಳನ್ನ ಹೊಂದಿರೋದ್ರಿಂದ, ಅವರಿಬ್ರು ತಕ್ಕಮಟ್ಟಿಗೆ ಬಲಿಷ್ಠರು ಆಗಿರೋದ್ರಿಂದ, ಅವರಿಂದಲೂ ಸೈಬರ್‌ ದಾಳಿಯಾಗುವ ಭೀತಿ ಇದೆ. ಹೀಗಾಗಿ ಆ ದಾಳಿಗೆ ಪ್ರತ್ಯುತ್ತರ ಕೊಡಬೇಕು ಅಂದ್ರೆ ಅಥವಾ ಅದರಿಂದ ರಕ್ಷಣೆ ಪಡೀಬೇಕು ಅಂದ್ರೆ ಭಾರತ ಕೂಡ ಅಲರ್ಟ್‌ ಆಗಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಹೊಸ ಹೊಸ ಹೆಜ್ಜೆಗಳನ್ನ ಇಡ್ತಾ ಸೈಬರ್‌ ಸೇನೆಯನ್ನ ಭದ್ರ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply