ಭಾರತ – ಚೀನಾ ಬಾರ್ಡರ್‌ನಲ್ಲಿ 15 ದಿನಗಳಿಂದ ಯೋಧರು ನಾಪತ್ತೆ..! ಏನಾಯ್ತು?

masthmagaa.com:

ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಇಬ್ಬರು ಯೋಧರು ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ ಅಂತ ವರದಿಯಾಗಿದೆ. ಭಾರತ-ಚೀನಾ ಗಡಿ LAC ಅಂದ್ರೆ ಲೈನ್‌ ಆಫ್‌ ಆಕ್ಚುವಲ್‌ ಕಂಟ್ರೋಲ್‌ನ ಈಸ್ಟರ್ನ್ ಸೆಕ್ಟರ್‌ನಲ್ಲಿದ್ದ ಇವ್ರು ಮೇ 28ರಿಂದ ಕಾಣೆಯಾಗಿದ್ದಾರೆ. ಮೇ 28 ರಂದು ಒಬ್ಬ ಯೋಧ ಜಾರಿ ನದಿಯಲ್ಲಿ ಬಿದ್ದಿದ್ದ. ಅವನನ್ನ ಕಾಪಾಡೋಕೆ ಇನ್ನೊಬ್ಬ ಯೋಧನೂ ನದಿಗೆ ಧುಮುಕಿದ್ದ. ಇಬ್ರು ನದಿಯಲ್ಲಿ ಕೊಚ್ಚಿ ಹೋಗಿರಬಹುದೆಂದು ಶಂಕೆ ವ್ಯಕ್ತವಾಗಿದೆ.

-masthmagaa.com

Contact Us for Advertisement

Leave a Reply