masthmagaa.com:
ಟ್ವಿಟರ್ ಖರೀದಿ ಬಳಿಕ ಮುಖ್ಯಸ್ಥ ಎಲಾನ್ ಮಸ್ಕ್ ಹಲವಾರು ಬದಲಾವಣೆಗಳನ್ನ ಮಾಡಿದ್ದಾರೆ. ಇದೀಗ ಅತಿದೊಡ್ಡ ಬದಲಾವಣೆ ಮಾಡಿದ್ದು, ಹೊಸ ಲೋಗೋವನ್ನು ಲಾಂಚ್ ಮಾಡಿದ್ದಾರೆ. ಟ್ವಿಟರ್ನಲ್ಲಿದ್ದ ನೀಲಿ ಹಕ್ಕಿ ಲೋಗೊವನ್ನ ಹಾರಿಸಿ, ಅದರ ಜಾಗದಲ್ಲಿ ಕಪ್ಪು ಅಕ್ಷರದಲ್ಲಿ ಎಕ್ಸ್ (X) ಅಂತ ಬರೆದಿರುವ ಲೋಗೋ ಪ್ರತ್ಯಕ್ಷವಾಗಿದೆ. ಮಸ್ಕ್ ನಿನ್ನೆಯಷ್ಟೇ ಲೋಗೋ ಬದಲಾವಣೆ ಆಗಲಿದೆ ಅಂದಿದ್ರು. ಇಂದು ನೂತನ ಲೋಗೋ ಬಿಡುಗಡೆ ಮಾಡಿ ಬಳಕೆದಾರರಿಗೆ ಅಚ್ಚರಿ ಮೂಡಿಸಿದ್ದಾರೆ. ಟ್ವಿಟರ್ನ CEO, ಲಿಂಡಾ ಯಾಕರಿನೊ, ಹೊಸ ಲೋಗೋದ ಫೋಟೋ ಟ್ವೀಟ್ ಮಾಡುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
-masthmagaa.com
Contact Us for Advertisement