ಜೆ಼ಕ್‌ ರಿಪಬ್ಲಿಕ್‌: ಹೆಲಿಕಾಪ್ಟರ್‌ನಿಂದ ಕೋಟಿ ಕೋಟಿ ಹಣ ಸುರಿದ ಇನ್‌ಫ್ಲುಯೆನ್ಸರ್, ಯಾಕೆ?

masthmagaa.com:

ಜೆ಼ಕ್‌ ಗಣರಾಜ್ಯದಲ್ಲಿ ಕಮಿಲ್‌ ಬರ್ತೊಶೇಕ್‌ ಅಲಿಯಾಸ್‌ ಕಜ಼್ಮ ಅನ್ನೊ TV ನಿರೂಪಕ, ನಟನೊಬ್ಬ ಬರೋಬ್ಬರಿ 1 ಮಿಲಿಯನ್‌ ಡಾಲರ್ ಅಂದ್ರೆ ಸುಮಾರು 8.3 ಕೋಟಿ ರೂಪಾಯಿ ಹಣವನ್ನ ಹೆಲಿಕಾಪ್ಟರ್‌ನಿಂದ ಸುರಿದಿದ್ದಾನೆ. ಈತ ಒಂದು ಸಿನೆಮಾ ಮಾಡಿದ್ದ. ಅದರಲ್ಲಿ ಒಂದು ಪಜ಼ಲ್‌ ಕೂಡ ಇಟ್ಟಿದ್ದ. ಗೆದ್ದೋರಿಗೆ 1 ಮಿಲಿಯನ್‌ ಡಾಲರ್‌ ಹಣ ಕೊಡ್ತೀನಿ ಅಂತ ಅನೌನ್ಸ್‌ ಮಾಡಿದ್ದ. ಆದ್ರೆ ರಿಜಿಸ್ಟರ್‌ ಮಾಡ್ಕೊಂಡಿದ್ದವ್ರಲ್ಲಿ ಒಬ್ಬರೂ ಈತನ ಪಜ಼ಲ್‌ ಅನ್ನ ಸಾಲ್ವ್‌ ಮಾಡೋಕೆ ಆಗಿಲ್ಲ. ಹಾಗಾಗಿ ಅವರೆಲ್ಲರಿಗೂ ಮೇಲ್ ಮಾಡಿ ʻಲೈಸಾ ನಾಡ್‌ ಲಬೆಮ್‌ʼ ನಗರದ ಒಂದು ಜಾಗಕ್ಕೆ ಬರೋಕೆ ಹೇಳಿ ಹಣವನ್ನ ಹೆಲಿಕಾಪ್ಟರ್‌ನಿಂದ ಸುರಿದಿದ್ದಾನೆ. ಸುರಿದ ಒಂದು ಗಂಟೆಯಲ್ಲೇ ಜನ ಹಣವನ್ನ ಬಾಚಿಕೊಂಡು ಹೋಗಿದ್ದಾರೆ. ಇವೆಲ್ಲವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರೊ ಕಜ಼್ಮ, ಇದು ವಿಶ್ವದ ಮೊದಲ ಹಣದ ಮಳೆ ಅಂತ ಕೂಡ ಕರೆದಿದ್ದಾನೆ.

-masthmagaa.com

Contact Us for Advertisement

Leave a Reply