ನ್ಯಾಟೋ ತೆಕ್ಕೆಗೆ ಬಿದ್ದ ಫಿನ್‌ಲ್ಯಾಂಡ್‌ಗೆ ಯುದ್ಧದ ಎಚ್ಚರಿಕೆ ನೀಡಿದ ರಷ್ಯಾ!

masthmagaa.com:

ರಷ್ಯಾ ಜೊತೆ ಸುದೀರ್ಘ ಗಡಿ ಹಂಚಿಕೊಂಡಿರುವ ಫಿನ್‌ಲ್ಯಾಂಡ್‌ ಅಂತಿಮವಾಗಿ ನ್ಯಾಟೋ ಒಕ್ಕೂಟದ 31ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ, ಇದು ರಷ್ಯಾದ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಮೇಲಿನ ದಾಳಿ ಅಂತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜೊತೆಗೆ ಯುದ್ಧ ಹಾಗೂ ಕಾರ್ಯತಂತ್ರದ ವಿಧಾನದಿಂದ ನ್ಯಾಟೋಗೆ ಸೇರಿರೋ ಫಿನ್‌ಲ್ಯಾಂಡ್‌, ನಮ್ಮನ್ನ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸುತ್ತದೆ ಅಂತ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಕಿಡಿಕಾರಿದ್ದಾರೆ. ಇನ್ನು ರಷ್ಯಾ ತನ್ನ ಗಡಿ ಪ್ರದೇಶದ ಬಳಿ ನ್ಯಾಟೋವನ್ನ ಬಿಟ್ಕೊಬಾರ್ದು, ನ್ಯಾಟೋಗೆ ರಷ್ಯಾ ಹತ್ತಿರ ಬರಲು ಅವಕಾಶ ನೀಡ್ಬಾರ್ದು ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರಯತ್ನ ಮಾಡ್ತಿದ್ರು. ಆದ್ರೆ ಎಲ್ಲವೂ ಅವ್ರಿಗೆ ವಿರುದ್ಧವಾಗಿ ನಡೀತಿದೆ ಅಂತ ನ್ಯಾಟೋ ಜನರಲ್‌ ಸೆಕ್ರೆಟರಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ. ಅಂದ್ರೆ ನಾವು ರಷ್ಯಾದ ಹತ್ರಕ್ಕೆ ಬಂದು ಬಿಟ್ಟಿದ್ದೀವಿ ಅಂತ ನ್ಯಾಟೋ ಮುಖ್ಯಸ್ಥ ಪುಟಿನ್‌ರನ್ನ ಕೆರಳಿಸೋ ಕೆಲಸ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply