ಚಂದ್ರಯಾನ-3 ಯೋಜನೆಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಮಮತಾ ಬ್ಯಾನರ್ಜಿ ಮಾಡಿದ ಎಡವಟ್ಟು ಏನು?

masthmagaa.com:

ಚಂದ್ರಯಾನ-3ರ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ಲೇವಡಿಗೆ ಗುರಿಯಾಗಿದೆ. ಚಂದ್ರಯಾನ- 3ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋದಕ್ಕೂ ಸ್ವಲ್ಪ ಸಮಯದ ಮುನ್ನ ಕೋಲ್ಕತಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ಯಾನರ್ಜಿ, ಗಗನಯಾನಿ ರಾಕೇಶ್ ಶರ್ಮಾ ಅವರ ಬದಲು ಹಿಂದಿ ಚಿತ್ರರಂಗದ ನಟ ಹಾಗೂ ನಿರ್ದೇಶಕ ರಾಕೇಶ್ ರೋಷನ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಪಶ್ಚಿಮ ಬಂಗಾಳದ ಜನತೆಯ ಪರವಾಗಿ ಇಸ್ರೋಗೆ ನಾನು ಮುಂಚಿತವಾಗಿಯೇ ಶುಭಾಶಯ ತಿಳಿಸುತ್ತೇನೆ. ವಿಜ್ಞಾನಿಗಳಿಗೆ ಶ್ರೇಯಸ್ಸು ಸಲ್ಲಬೇಕು. ರಾಕೇಶ್ ರೋಷನ್ ಅವರು ಚಂದ್ರನ ಮೇಲೆ ಇಳಿದಿದ್ದಾಗ, ಅಲ್ಲಿಂದ ಭಾರತ ಹೇಗೆ ಕಾಣಿಸುತ್ತೆ ಅಂತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕೇಳಿದ್ರು ಅಂತ ಹೇಳಿದ್ದಾರೆ. ರಾಕೇಶ್ ಶರ್ಮಾ ಅವರ ಹೆಸರಿನ ಬದಲು ಗೊಂದಲದಿಂದ ರಾಕೇಶ್ ರೋಷನ್ ಅಂತ ಹೇಳಿದ್ದು ಮಾತ್ರವಲ್ಲದೆ, ಅವರು ಚಂದ್ರನ ಮೇಲೆ ಇಳಿದಿದ್ದರು ಅಂತ ಹೇಳಿರೋದು ವ್ಯಂಗ್ಯಕ್ಕೆ ಗುರಿಯಾಗಿದೆ. ಅಂದ್ಹಾಗೆ ಭಾರತೀಯ ವಾಯು ಪಡೆಯ ಪೈಲಟ್ ಆಗಿದ್ದ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಪಯಣಿಸಿದ್ದ ಮೊದಲ ಭಾರತೀಯರಾಗಿದ್ದಾರೆ. 1984ರಲ್ಲಿ ಅವರು ಸೋವಿಯತ್ ಒಕ್ಕೂಟದ ಸೋಯುಜ್ ಟಿ-11 ಯೋಜನೆಯ ಭಾಗವಾಗಿದ್ರು. ನೇರ ಟಿವಿ ಸುದ್ದಿಗೋಷ್ಠಿ ವೇಳೆ ಬಾಹ್ಯಾಕಾಶದಿಂದ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಜೊತೆ ಮಾತಾಡಿದ್ರು.

-masthmagaa.com

Contact Us for Advertisement

Leave a Reply