ಇರಾನ್‌ನಲ್ಲಿ ಹೆಚ್ಚಾದ ಮರಣದಂಡನೆ ಪ್ರಕರಣ, ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ!

masthmagaa.com:

ಇರಾನ್‌ನಲ್ಲಿ ನಶಾ ವಸ್ತು ಹಾಗೂ ಅತ್ಯಾಚಾರ ಆರೋಪದಲ್ಲಿ ಹೊಸದಾಗಿ ಮತ್ತೆ 7 ಮಂದಿಯನ್ನ ಗಲ್ಲಿಗೇರಿಸಲಾಗಿದೆ ಅಂತ ಅಲ್ಲಿನ ಮಾನವ ಹಕ್ಕುಗಳ ಅಂಸ್ಥೆ ಹೇಳಿದೆ. ರಾಜಧಾನಿ ಟೆಹ್ರಾನ್‌ನ ಹೊರವಲಯದಲ್ಲಿ 2 ಜೈಲುಗಳ 7 ಕೈದಿಗಳನ್ನ ಗಲ್ಲಿಗೇರಿಸಲಾಗಿದೆ. ಇನ್ನು ಇರಾನ್‌ನಲ್ಲಿ ಕಳೆದ 12 ದಿನಗಳಲ್ಲಿ ಕನಿಷ್ಠ 64 ಮರಣದಂಡನೆ ಕೇಸ್‌ಗಳು ವರದಿಯಾಗಿವೆ. ಇತ್ತ ಇರಾನ್‌ನ ಪ್ರತಿಯೊಬ್ಬ ಮಹಿಳೆ ತಮ್ಮ ತಾಯಂದಿರನ್ನ ಗೌರವಿಸಲು ಕಡ್ಡಾಯವಾಗಿ ಹಿಜಾಬ್‌ ಧರಿಸ್ಬೇಕು ಅನ್ನೊ ಜಾಹೀರಾತು ಫಲಕಗಳನ್ನ ಇರಾನ್‌ನಲ್ಲಿ ಹಾಕಲಾಗಿದೆ. ಜೊತೆಗೆ ಹಿಜಾಬ್‌ ಧರಿಸಿದ ಮಹಿಳೆಯರಿಗೆ ಏರ್‌ಪೋರ್ಟ್‌ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸೇವೆಯನ್ನ ಒದಗಿಸದಂತೆ ಅದಿಕಾರಿಗಳು ಎಚ್ಚರಿಸಿದ್ದಾರೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಹಿಜಾಬ್‌ ವಿಚಾರವಾಗಿ ಪೊಲೀಸರ ಕಸ್ಟಡಿಯಲ್ಲಿ ಮಹ್ಸಾ ಅಮಿನಿ ಅನ್ನೊ ಯುವತಿ ಸಾವನ್ನಪ್ಪಿದ್ರು. ಇದನ್ನ ವಿರೋಧಿಸಿ ಇರಾನ್‌ನಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು.

-masthmagaa.com

Contact Us for Advertisement

Leave a Reply