ʻರೋಜ್‌ಗಾರ್‌ ಮೇಳʼದ ಭಾಗವಾಗಿ 71 ಸಾವಿರ ಯುವಕರಿಗೆ ಸರ್ಕಾರಿ ಉದ್ಯೋಗ!

masthmagaa.com:

ಪ್ರಧಾನಿ ಮೋದಿ ಅವ್ರು ʻರೋಜ್‌ಗಾರ್‌ ಮೇಳʼದ ಭಾಗವಾಗಿ ದೇಶಾದ್ಯಂತ ಆಯ್ಕೆಯಾಗಿರೋ 71 ಸಾವಿರ ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನ ನೀಡಿದ್ದಾರೆ. ಜೊತೆಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನ ನಿರಂತರವಾಗಿ ಸೃಷ್ಟಿಸೋಕೆ ನಾವು ಬದ್ಧರಾಗಿದ್ದೇವೆ ಅಂತ ಕೂಡ ಭರವಸೆ ನೀಡಿದ್ದಾರೆ. ಇನ್ನು ಈ ರೋಜ್‌ಗಾರ್‌ ಮೇಳ ಅಭಿಯಾನವನ್ನ 10 ಲಕ್ಷ ಸರ್ಕಾರಿ ಕೆಲಸಗಳನ್ನ ಸೃಷ್ಟಿಸೋ ಗುರಿಯೊಂದಿಗೆ ಕಳೆದ ವರ್ಷ ಪ್ರಾರಂಭಿಸಲಾಗಿತ್ತು. 2022ರ ಅಕ್ಟೋಬರ್‌ನಲ್ಲಿ 75 ಸಾವಿರ ಹಾಗೂ ನವಂಬರ್‌ನಲ್ಲಿ 71 ಸಾವಿರ ನೇಮಕಾತಿ ಪತ್ರಗಳನ್ನ ನೀಡಲಾಗಿತ್ತು. ಇತ್ತ ಇದಕ್ಕೆ ಪ್ರತಿಕ್ರಿಯೆ ನೀಡಿರೋ ಕಾಂಗ್ರೆಸ್‌, 8 ವರ್ಷಗಳಲ್ಲಿ 16 ಕೋಟಿ ಜಾಬ್‌ ಸೃಷ್ಟಿ ಮಾಡ್ತೀವಿ ಅಂತ ಮೋದಿ ಭರವಸೆ ನೀಡಿದ್ರು. ಆದ್ರೆ ಕೇವಲ 71 ಸಾವಿರ ನೇಮಕಾತಿ ಪತ್ರ ನೀಡಿದ್ದಾರೆ.. ಉಳಿದ ಉದ್ಯೋಗ ಎಲ್ಲಿ ಸೃಷ್ಟಿಯಾಗಿವೆ ಅನ್ನೋದ್ರ ಬಗ್ಗೆ ವಿವರಣೆ ನೀಡಿ ಅಂತ ಆಗ್ರಹಿಸಿದೆ. ಹಾಗೂ ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿಯಿವೆ. ನೀವು ನೀಡಿದ ನೇಮಕಾತಿ ಪತ್ರಗಳು ತುಂಬಾ ಕಡಿಮೆಯಲ್ವಾ ಅಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply