ಗ್ಯಾನ್‌ವಾಪಿ ಮಸೀದಿಯಲ್ಲಿ 55 ಶಿಲ್ಪಗಳು ಪತ್ತೆ! ASI ವರದಿ!

masthmagaa.com:

ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯಲ್ಲಿ ASI ನಡೆಸಿದ್ದ ಸರ್ವೆ ವರದಿ ಬಹಿರಂಗವಾಗಿದ್ದು, ಹಿಂದೂ ದೇವಾಲಯಗಳ ಮೂರ್ತಿಗಳು ಪತ್ತೆಯಾದ ಬಗ್ಗೆ ಉಲ್ಲೇಖಿಸಲಾಗಿತ್ತು. ಇದೀಗ ಈ ಕುರಿತು ಇನ್ನಷ್ಟು ಇಂಟ್ರೆಸ್ಟಿಂಗ್‌ ಮಾಹಿತಿಗಳು ಹೊರಬಿದ್ದಿವೆ. ಗ್ಯಾನ್‌ವಾಪಿ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಇದೀಗ ಒಟ್ಟು 55 ಕಲ್ಲಿನ ಶಿಲ್ಪಗಳು ಸಿಕ್ಕಿದೆ ಎನ್ನಲಾಗಿದೆ. ಇವುಗಳ ಪೈಕಿ 15 ಶಿವ ಲಿಂಗಗಳು, 3 ವಿಷ್ಣು, 3 ಗಣೇಶ, 2 ನಂದಿ, 2 ಕೃಷ್ಣ ಮತ್ತು 5 ಹನುಮಂತನ ಶಿಲ್ಪಗಳು ಪತ್ತೆಯಾಗಿವೆ ಅಂತ ASI ವರದಿಯಲ್ಲಿದೆ. ಇನ್ನು ಈ 55 ಕಲ್ಲಿನ ಶಿಲ್ಪಗಳ ಜೊತೆಗೆ ಮನೆಯಲ್ಲಿ ಬಳಸಲಾಗೋ 21 ವಸ್ತುಗಳು ಸಿಕ್ಕಿವೆ. ಅಲ್ದೇ 5 ಕೆತ್ತಲಾದ ಕಲ್ಲಿನ ಚಪ್ಪಡಿಗಳು, ದೇವಾಲಯದ ಕೆತ್ತನೆಗಳಿಗೆ ಸಪೋರ್ಟ್‌ ಆಗಿ ಬಳಸಿದ್ದ 176 ಸ್ಟ್ರಕ್ಚರ್‌ಗಳು, 27 ಟೆರಾಕೋಟಾ ವಸ್ತುಗಳು ಮತ್ತು 23 ಟೆರಾಕೋಟಾ ಪ್ರತಿಮೆಗಳು ಸಿಕ್ಕಿವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply