ಮಳೆ ಕಾಟದಿಂದ ತಪ್ಪಿಸಿಕೊಳ್ಳಲು ಏಷ್ಯಾ ಕಪ್‌ ಪಂದ್ಯಗಳ ಸ್ಥಳಾಂತರ?

masthmagaa.com:

ಶ್ರೀಲಂಕಾದಲ್ಲಿ ನಡೆಯುತ್ತಿರುವ 2023ರ ಏಷ್ಯಾಕಪ್‌ ಟೂರ್ನಿಗೆ ಮಳೆ ಕಾಟ ಎದುರಾಗಿದೆ. ಈ ಹಿನ್ನಲೆಯಲ್ಲಿ ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯಲಿರುವ ಸೂಪರ್‌ 4 ಪಂದ್ಯಗಳನ್ನ ಸ್ಥಳಾಂತರ ಮಾಡಲು ICC ಯೋಚಿಸುತ್ತಿದೆ ಅಂತ ತಿಳಿದು ಬಂದಿದೆ. ಈ ಪಂದ್ಯಗಳನ್ನ ಪಲ್ಲೆಕಲೆ, ದಾಂಬುಲ್ಲಾ ಹಾಗೂ ಹಂಬನ್‌ತೋಟಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ. ಈಗಾಗಲೇ ಸೂಪರ್‌ 4ನಲ್ಲಿ ಭಾಗವಹಿಸಲಿರುವ 6 ಟೀಂಗಳಿಗೆ ಸ್ಥಳ ಬದಲಾವಣೆ ಬಗ್ಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಅಂದ್ಹಾಗೆ 5 ಸೂಪರ್‌ 4 ಹಾಗೂ ಫೈನಲ್‌ ಪಂದ್ಯವನ್ನ ಕೊಲೊಂಬೊದಲ್ಲಿ ನಡೆಸಲು ನಿಗದಿ ಪಡಿಸಲಾಗಿತ್ತು. ಆದ್ರೆ ಮಳೆ ಹೆಚ್ಚಾಗುವ ಸಾಧ್ಯತೆ ಬಗ್ಗೆ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕಾರಣಕ್ಕೆ ಚೇಂಜ್‌ ಮಾಡಲು ICC ಮುಂದಾಗಿದೆ ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply