ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಕಾಯ್ದೆ ರದ್ದು! UCC ಕಡೆ ಹೊಸ ಹೆಜ್ಜೆ?

masthmagaa.com:

ಏಕರೂಪ ನಾಗರಿಕ ಸಂಹಿತೆ ಅಥ್ವಾ UCC ಬಿಲ್‌ ಉತ್ತರಾಖಂಡದಲ್ಲಿ ಪಾಸ್‌ ಆದ ಬಳಿಕ ಇದೀಗ ಅಸ್ಸಾಂನಲ್ಲಿ UCC ಬಿಲ್‌ ಸೌಂಡ್‌ ಮಾಡೋ ಹಾಗೇ ಕಾಣ್ತಿದೆ. ಮಹತ್ವದ ಬೆಳವಣಿಗೆಯಲ್ಲಿ 1935ರ ಮುಸ್ಲಿಂ ವಿವಾಹ ಹಾಗೂ ವಿಚ್ಛೇದನೆ ನೋಂದಣಿ ಕಾಯ್ದೆಯನ್ನ ಅಸ್ಸಾಂ ಸರ್ಕಾರ ಫೆಬ್ರುವರಿ 23 ರಂದು ರದ್ದು ಮಾಡಿದೆ. ಆ ಮೂಲಕ UCC ಕಡೆ ಒಂದ್‌ ಹೆಜ್ಜೆ ಇಡೋ ಪ್ಲಾನ್‌ ಮಾಡ್ಕೊಂಡಿದೆ. ಈ ಮುಸ್ಲಿಂ ಕಾಯ್ದೆ ರದ್ದತಿಗೆ ಅಸ್ಸಾಂ ಕ್ಯಾಬಿನೆಟ್‌ ಅಪ್ರೂವಲ್ ನೀಡಿದೆ ಅಂತ ಖುದ್ದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮಾ ಮಾಹಿತಿ ನೀಡಿದ್ದಾರೆ. ಈ ಮೂಲಕ ʻಅಸ್ಸಾಂ ಕ್ಯಾಬಿನೆಟ್‌ ಮಹತ್ವದ ಹೆಜ್ಜೆ ಇಟ್ಟಿದೆ… ಕಾನೂನುಬದ್ದವಾಗಿ ವಧು ಮತ್ತು ವರರು 18 ಮತ್ತು 21 ತಲುಪದಿದ್ದರೂ ವಿವಾಹ ನೋಂದಣಿಗೆ ಅವಕಾಶ ನೀಡೋ ನಿಬಂಧನೆಗಳನ್ನ ಈ ಕಾಯ್ದೆ ಒಳಗೊಂಡಿತ್ತು. ಸೋ ಅಸ್ಸಾಂನಲ್ಲಿ ಬಾಲ್ಯ ವಿವಾಹವನ್ನ ತಡೆಯೋಕೆ ಈ ಮಹತ್ವದ ನಿರ್ಧಾರದಿಂದ ಒಂದೊಳ್ಳೆ ಹೆಜ್ಜೆ ಇಟ್ಟಂತಾಗಿದೆʼ ಅಂತ ಸಿಎಂ ಸರ್ಮಾ ಹೇಳಿದ್ದಾರೆ. ಈ ಮೂಲಕ ಮುಸ್ಲಿಂರು ತಮ್ಮ ವಿವಾಹ ಮತ್ತು ಡಿವೋರ್ಸ್‌ಗೆ ಸ್ವಯಂ ಪ್ರೇರಿತ ನೋಂದಣಿ ಮಾಡೋ ಹಾಗಿಲ್ಲ… ಅದಕ್ಕೆ ಕಂಪ್ಲೀಟಾಗಿ ನಿಷೇಧ ಹೇರಲಾಗುತ್ತೆ. ಅಷ್ಟೇ ಅಲ್ದೇ ಮುಸ್ಲಿಂ ಸಮುದಾಯದಲ್ಲಿ ವಿವಾಹ ಮತ್ತು ವಿಚ್ಛೇದನ ನೋಂದಾಯಿಸಲು ಲೈಸೆನ್ಸ್‌ ಹೊಂದಿರೋ ಮುಸ್ಲಿಂ ರೆಜಿಸ್ಟ್ರಾರ್‌ಗಳಿಗೆ ಇನ್ಮುಂದೆ ಆ ಹಕ್ಕು ಇರೋದಿಲ್ಲ. ಈ ಕಾಯಿದೆ ರದ್ದಾದ ಮೇಲೆ ಮುಸ್ಲಿಂರ ವಿವಾಹ ಮತ್ತು ವಿಚ್ಛೇದನೆ ನೋಂದಣಿಯನ್ನ ಅಸ್ಸಾಂನ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ರೆಜಿಸ್ಟ್ರೇಷನ್‌ನ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡ್ತಾರೆ. ಜೊತೆಗೆ.. ಪ್ರಮುಖವಾಗಿ ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷ ಪೂರ್ತಿಯಾಗ್ದೇ ಮುಸ್ಲಿಂರು ಮದುವೆಯಾಗೋ ಹಾಗಿಲ್ಲ. ಒಟ್ಟಾರೆಯಾಗಿ ಈ ಹೊಸ ಕಾನೂನು ಬದಲಾವಣೆ UCCಗೆ ಹೋಲುವಂತಿದ್ದು..

ಅಸ್ಸಾಂನಲ್ಲಿ UCC ಬಿಲ್‌ನ್ನ ಸ್ವಾಗತ ಮಾಡೋಕೆ ಹಿಮಂತ ಬಿಸ್ವಾ ಸರ್ಮಾ ಫುಲ್‌ ತಯಾರಿ ಮಾಡ್ತಿರೋ ಹಾಗಿದೆ. ಅವ್ರು ಅಸ್ಸಾಂನ ಸಿಎಂ ಆದಾಗಿನಿಂದ ರಾಜ್ಯದಲ್ಲಿ UCC ಬಿಲ್‌ ಪಾಸ್‌ ಮಾಡೋದು ಅವ್ರ ಪ್ರಮುಖ ಗುರಿಯಾಗಿತ್ತು. ಇತ್ತೀಚೆಗಷ್ಟೇ ಅಸ್ಸಾಂನಲ್ಲಿ ಬುಹುಪತ್ನಿತ್ವ ಬ್ಯಾನ್‌ ಮಾಡೋದಾಗಿ ಹೇಳಿದ್ರು. ಅಷ್ಟೇ ಅಲ್ದೇ ದೇಶದಲ್ಲಿ ಉತ್ತರಾಖಂಡ ಮತ್ತು ಗುಜರಾತ್‌ ನಂತ್ರ UCC ಬಿಲ್‌ ಇಂಪ್ಲಿಮೆಂಟ್‌ ಮಾಡೋ ರಾಜ್ಯ ಅಸ್ಸಾಂ ಅಂತ ಪದೇ ಪದೇ ಹೇಳ್ತಲೇ ಬಂದಿದ್ರು. ಆದ್ರೆ ಅಸ್ಸಾಂನ ಬುಡಕಟ್ಟು ಸಮುದಾಯಕ್ಕೆ ಮಾತ್ರ UCCಯಿಂದ ವಿನಾಯಿತಿ ಸಿಗುತ್ತೆ ಅಂತೇಳಿದ್ರು. ಇನ್ನು 2-3 ತಿಂಗಳ ಒಳಗೆ UCC ಬಿಲ್‌ನ್ನ ಇಂಪ್ಲಿಮೆಂಟ್‌ ಮಾಡಲಾಗುತ್ತೆ ಅಂತ ಜನವರಿಯಲ್ಲೇ ಹೇಳಿದ್ರು. ಸೋ..ಇದೀಗ ಇವ್ರ ಸರ್ಕಾರದ ಈ ಹೊಸ ನಿರ್ಧಾರ, UCCಗೆ ಅಸ್ಸಾಂನಲ್ಲಿ ದಾರಿ ಮಾಡ್ಕೊಟ್ಟ ಹಾಗಿದೆ.

-masthmagaa.com

Contact Us for Advertisement

Leave a Reply