ʻಉಲ್ಫಾʼ ಉಗ್ರ ಗುಂಪಿನ ಜೊತೆ ಕೇಂದ್ರ, ಅಸ್ಸಾಂ ತ್ರಿಪಕ್ಷೀಯ ಒಪ್ಪಂದ?

masthmagaa.com:

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ United Liberation Front of Asom (ULFA) ಗುಂಪಿನ ಬಂಡಾಯ ಮಾಡೋಕೆ ಕೇಂದ್ರ ಹಾಗೂ ಅಸ್ಸಾಂ ಸರ್ಕಾರಗಳು ಸಜ್ಜಾಗಿವೆ. ಶುಕ್ರವಾರ ಗೃಹ ಸಚಿವ ಅಮಿತ್‌ ಶಾ ಸಮ್ಮುಖದಲ್ಲಿ ಉಲ್ಫಾ ಗುಂಪಿನ ಜೊತೆ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಬೀಳಲಿದೆ. ಅಸ್ಸಾಂ ಸಿಎಂ ಹಿಮಂತ್‌ ಬಿಸ್ವಾ ಸರ್ಮ ಹಾಗೂ ಉಲ್ಫಾ ಲೀಡರ್‌ಗಳು ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ. ಈ ಮೂಲಕ ದಶಕಗಳ ಸಂಘರ್ಷಕ್ಕೆ ತೆರೆ ಬಿದ್ದು ಇಲ್ಲಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ನಿವಾರಣೆ ಆಗಲಿವೆ ಅಂತೇಳಲಾಗ್ತಿದೆ. ಅಂದ್ಹಾಗೆ 2011ರಲ್ಲೇ ಕೇಂದ್ರದ ಜೊತೆ ಮಾತುಕತೆ ನಡೆಸೋಕೆ ಅರಬಿಂದ ರಾಜ್ಕೋವಾ ನೇತೃತ್ವದ ಬಣ ಸಿದ್ಧವಿತ್ತು. ಆದ್ರೆ ಮಯನ್ಮಾರ್‌ ಗಡಿ ಬಳಿ ಇದ್ದ ದಿಂದ ವಿರೋಧ ಉಂಟಾಗಿ ಒಪ್ಪಂದದ ಪ್ಲಾನ್‌ ಮುರಿದು ಬಿದ್ದಿತ್ತು. 1979ರಲ್ಲಿ ಸ್ವತಂತ್ರ ಸಾರ್ವಭೌಮ ಅಸ್ಸಾಂ ರಚನೆಯಾಗ್ಬೇಕು ಅನ್ನೋ ಬೇಡಿಕೆಯಿಂದ ಶುರುವಾದ ಉಲ್ಫಾ ಇದೀಗ ಶಸ್ತ್ರ ತ್ಯಾಗ ಮಾಡೋಕೆ ರೆಡಿಯಾಗಿದೆ.

-masthmagaa.com

Contact Us for Advertisement

Leave a Reply