ತೆಲಂಗಾಣದಲ್ಲಿ UCC ಜಾರಿ: ಅಮಿತ್‌ ಶಾ ಮೆಗಾ ಆಫರ್!‌

masthmagaa.com:

ಚುನಾವಣೆ ಹೊಸ್ತಿಲಲ್ಲಿರೊ ತೆಲಂಗಾಣದಲ್ಲಿ ಬಿಜೆಪಿ ತನ್ನ ಮ್ಯಾನಿಫೆಸ್ಟೊ ರಿಲೀಸ್‌ ಮಾಡಿದೆ. ಅಧಿಕಾರಕ್ಕೆ ಬಂದ್ರೆ ವಾರದೊಳಗೆ ತೆಲಂಗಾಣದಲ್ಲಿ ಏಕರೂಪ ನಾಗರಿಕ ಸಂಹಿತೆ(UCC) ಜಾರಿ ಮಾಡ್ತೀವಿ ಅಂತ ಗೃಹ ಸಚಿವ ಅಮಿತ್‌ ಶಾ ಅನೌನ್ಸ್‌ ಮಾಡಿದ್ದಾರೆ. ಹೈದ್ರಾಬಾದ್‌ನಲ್ಲಿ ಮಾತನಾಡೋ ವೇಳೆ ತೆಲಂಗಾಣದಲ್ಲಿ ಪ್ರಜಾತಂತ್ರ ಇಲ್ಲ. ಸಿಎಂ KCR ನಾಯಕತ್ವದಲ್ಲಿ ಅದು ಲೂಟಿ ತಂತ್ರ, ಪರಿವಾರ ತಂತ್ರ ಆಗೋಗಿದೆ ಅಂತ ಟೀಕೆ ಮಾಡಿದ್ದಾರೆ. ಇದೇ ವೇಳೆ ನಾವು ಅಧಿಕಾರಕ್ಕೆ ಬಂದ್ರೆ BRS ಸರ್ಕಾರದಲ್ಲಿ ನಡೆದಿರೊ ಭ್ರಷ್ಟಾಚಾರದ ತನಿಖೆ ಮಾಡೋಕೆ ನಿವೃತ್ತ ನ್ಯಾಯಾಧೀಶರ ನ್ಯಾಯಾಂಗದ ಆಯೋಗವನ್ನ ನೇಮಕ ಮಾಡ್ತೀವಿ ಎಂದಿದ್ದಾರೆ. ಇನ್ನು ಪರಿಶಿಷ್ಟ ಜಾತಿ(SC)ಯಲ್ಲಿ ಬರೋ ಸಮುದಾಯಗಳ ಉಪ-ವರ್ಗೀಕರಣ, ಪ್ರತಿ ವರ್ಷ ಸೆಪ್ಟೆಂಬರ್‌ 17ಕ್ಕೆ ಹೈದ್ರಾಬಾದ್‌ ವಿಮೋಚನಾ ದಿನದ ಆಚರಣೆ, ಪೆಟ್ರೋಲ್‌, ಡೀಸೆಲ್‌ ಮೇಲಿನ VAT ಕಮ್ಮಿ ಮಾಡುವ ಹಾಗೂ ಕುಟುಂಬಗಳಿಗೆ ವಾರ್ಷಿಕ ನಾಲ್ಕು ಉಚಿತ ಗ್ಯಾಸ್‌ ಸಿಲಿಂಡರ್‌ ಸೇರಿದಂತೆ ಹಲವು ಸವಲತ್ತುಗಳನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅನೌನ್ಸ್‌ ಮಾಡಿದೆ. ಅಂದ್ಹಾಗೆ ನವೆಂಬರ್‌ 30ಕ್ಕೆ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply