ರಾಜಸ್ತಾನ: ಮಹಿಳೆಯರ ವೋಟ್‌ ಬ್ಯಾಂಕ್‌ನತ್ತ ಕಮಲ ಪಡೆಯ ಚಿತ್ತ!

masthmagaa.com:

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ಪಕ್ಷಗಳ ಪ್ರೀಬೀಸ್‌ ಭರವಸೆ ಭಾರಿ ಸದ್ದು ಮಾಡ್ತಿದೆ. ಇದೀಗ ರಾಜಸ್ತಾನದಲ್ಲಿ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ “ಸಂಕಲ್ಪ ಪತ್ರ” ಹೆಸರಿನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರೋತ್ಸಾಹಣ್‌ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳಿಗೆ 2 ಲಕ್ಷದ ಉಳಿತಾಯ ಬಾಂಡ್‌, ಸ್ನಾತಕೋತ್ತರ ಪದವಿವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ಮಹಿಳೆಯರ ಸುರಕ್ಷತೆಗಾಗಿ ಜಿಲ್ಲೆಗೊಂದು ಮಹಿಳಾ ಸುರಕ್ಷತಾ ಘಟಕ ನಿರ್ಮಾಣ. ಲಖಪತಿ ಯೋಜನೆಯಡಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ, ಗೋಧಿಗೆ ಪ್ರತಿ ಕ್ವಿಂಟಾಲ್‌ಗೆ 2,700ರೂಪಾಯಿ ಬೆಂಬಲ ಬೆಲೆ ಹಾಗೂ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್‌ ಖರೀದಿಸಲು 450ರೂಪಾಯಿ ಸಬ್ಸಿಡಿ, ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಡಿ ನೀಡುವ ಸಹಾಯಧನ ವರ್ಷಕ್ಕೆ 12ಸಾವಿರ ರೂಗೆ ಏರಿಕೆ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌, ಸಮವಸ್ತ್ರ ಕೊಳ್ಳಲು ವಾರ್ಷಿಕ 12 ಸಾವಿರ ರೂಪಾಯಿ ಧನ ಸಹಾಯ ಸೇರಿದಂತೆ ಇನ್ನಿತರ ವಿಚಾರಗಳನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಅಂದ್ಹಾಗೆ ನವೆಂಬರ 25ಕ್ಕೆ ರಾಜಸ್ತಾನದಲ್ಲಿ ಚುನಾವಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply