ತನ್ನ ವ್ಯಾಕ್ಸಿನ್‌ನಿಂದ ಕೆಲವೊಮ್ಮೆ ಸೈಡ್‌ ಎಫೆಕ್ಟ್ಸ್‌: ಆಸ್ಟ್ರಾಜೆನೆಕಾ!

masthmagaa.com:

ಕೋವಿಡ್‌ ವ್ಯಾಕ್ಸಿನ್‌ ವಿಚಾರದಲ್ಲಿ ಶಾಕಿಂಗ್‌ ವಿಚಾರ ಒಂದು ಹೊರಬಂದಿದೆ. ಕೋವಿ ಶೀಲ್ಡ್‌ ವ್ಯಾಕ್ಸಿನ್‌ನ ಅಭಿವೃದ್ದಿ ಪಡಿಸಿದ್ದ ಬ್ರಿಟನ್‌-ಸ್ವೀಡಿಶ್‌ ಕಂಪನಿ ಆಸ್ಟ್ರಾಜೆನೆಕಾ ಇದೇ ಮೊದಲ ಬಾರಿಗೆ ತನ್ನ ವ್ಯಾಕ್ಸಿನ್‌ನಿಂದ ಕೆಲವೊಮ್ಮೆ ಸೈಡ್‌ ಎಫೆಕ್ಟ್ಸ್‌ ಉಂಟಾಗಿರ್ಬಹುದು ಅಂತ ಕೋರ್ಟ್‌ನಲ್ಲಿ ಒಪ್ಕೊಂಡಿದೆ. ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಜೊತೆಗೂಡಿ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯನ್ನ ಕಂಡು ಹಿಡಿದಿತ್ತು. ಇದನ್ನ ಜಗತ್ತಿನಾದ್ಯಂತ ಕೋವಿಶೀಲ್ಡ್‌ ಮತ್ತು ವ್ಯಾಕ್ಸ್‌ಜರ್ವಿಯಾ ಅನ್ನೋ ಹೆಸರಲ್ಲಿ ಬಳಸಲಾಗಿತ್ತು. ಭಾರತದಲ್ಲಿ ಕೋವಿಶೀಲ್ಡ್‌ನ್ನ ಸೆರಂ ಇನ್‌ಸ್ಟಿಟ್ಯೂಟ್‌ ತಯಾರು ಮಾಡ್ತಿತ್ತು. ಸುಮಾರು 174 ಕೋಟಿ ಡೋಸ್‌ ಕೋವಿಶೀಲ್ಡ್‌ ಕೋವಿಡ್‌ ಲಸಿಕೆಯನ್ನ ಭಾರತದಲ್ಲಿ ನೀಡಲಾಗಿತ್ತು. ಆದ್ರೆ ಈ ಲಸಿಕೆಯಿಂದ ಅಡ್ಡಪರಿಣಾಮ ಇದೆ ಅಂತ ಜಗತ್ತಿನಾದ್ಯಂತ ಹಲವಾರು ಕಡೆ ಪ್ರಕರಣ ದಾಖಲಾಗಿಸಿತ್ತು. ಅದೇ ರೀತಿ ಬ್ರಿಟನ್‌ನಲ್ಲಿ ಜೇಮಿ ಸ್ಕಾಟ್‌ ಅನ್ನೋರು ಲಸಿಕೆಯಿಂದ ತಮಗೆ ಪರ್ಮನೆಂಟ್‌ ಬ್ರೇನ್‌ ಇಂಜುರಿಯಾಗಿದೆ ಅಂತ ಯುಕೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ರು. ಈ ಅರ್ಜಿ ವಿಚಾರಣೆ ವೇಳೆ ಆಸ್ಟ್ರಾಜೆನೆಕಾ ಅಪರೂಪದ ಕೇಸ್‌ಗಳಲ್ಲಿ ಕೆಲವೊಮ್ಮೆ ನಮ್ಮ ಲಸಿಕೆಯಿಂದ Thrombosis with thrombocytopenia syndrome (TTS) ಅಂದ್ರೆ ರಕ್ತ ಹೆಪ್ಪುಗಟ್ಟೋದು ಜೊತೆಗೆ ಪ್ಲೇಟ್ಲೆಟ್‌ ಕೌಂಟ್‌ ಕಡಿಮೆಯಾಗುವ ಖಾಯಿಲೆ ಬರ್ಬಹುದು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply