ಗ್ರೀಸ್:‌ ದೋಣಿ ಮುಳುಗಿ, 79 ಸಾವು

masthmagaa.com:

ನೈಜೀರಿಯಾದಲ್ಲಿ ನಿನ್ನಯಷ್ಟೇ ದೋಣಿಯೊಂದು ಮುಳುಗಿ 100ಕ್ಕೂ ಅಧಿಕ ಜನ ಮೃತಪಟ್ಟಿದ್ರು. ಇದೀಗ ಅಂಥದ್ದೆ ಮತ್ತೊಂದು ಘಟನೆ ದಕ್ಷಿಣ ಗ್ರೀಸ್‌ನಲ್ಲಿ ನಡೆದಿದೆ. ವಲಸಿಗರನ್ನ ಕರೆದೊಯ್ಯುತ್ತಿದ್ದ ಮೀನುಗಾರಿಕಾ ದೋಣಿ ಮುಗುಚಿ 79 ಜನ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 104 ಜನರನ್ನ ರಕ್ಷಿಸಲಾಗಿದೆ. ಹಾಗೇ ಎಷ್ಟು ಜನ ನಾಪತ್ತೆಯಾಗಿದ್ದಾರೆ ಅನ್ನೊದು ತಿಳಿದಿಲ್ಲ ಅಂತ ಗ್ರೀಕ್‌ ಕೋಸ್ಟ್‌ ಗಾರ್ಡ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply