ಸಬ್‌ಮರೀನ್‌ ನಾಪತ್ತೆ! ತೀವ್ರ ಹುಡುಕಾಟ! ಮತ್ತೆ ʼಟೈಟಾನಿಕ್‌ʼ ದುರಂತ?

masthmagaa.com:

ಟೈಟಾನಿಕ್‌ ಹಡಗಿನ ಅವಶೇಷಗಳನ್ನ ನೋಡೋಕೆ ಪ್ರವಾಸಿಗರನ್ನ ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನೌಕೆ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ಅಮೆರಿಕದ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ. ನಾಪತ್ತೆಯಾಗಿರುವ ಜಲಾಂತರ್ಗಾಮಿ ಟೈಟಾನ್‌ ಸಬ್‌ಮರ್ಸಿಬಲ್‌ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಕಂಪನಿಗೆ ಸೇರಿದ್ದು, ಅದರಲ್ಲಿದ್ದ ಸಿಬ್ಬಂದಿ ಸೇರಿ 5 ಜನ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗ್ತಿದೆ ಅಂತ ಕಂಪನಿ ತಿಳಿಸಿದೆ. ಈ ಜಲಾಂತರ್ಗಾಮಿ ಜೂನ್‌ 18ರಂದು ತನ್ನ ಪ್ರಯಾಣ ಬೆಳೆಸಿದ್ದು, ಸುಮಾರು ಒಂದು ಗಂಟೆ 45 ನಿಮಿಷಗಳ ನಂತ್ರ ತನ್ನ ಸಂಪರ್ಕ ಕಳೆದುಕೊಂಡಿದೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಏಪ್ರಿಲ್ 14, 1912 ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ಮಂಜುಗಡ್ಡೆಗೆ ಡಿಕ್ಕಿ ಹೊಡೆದ ನಂತರ ಟೈಟಾನಿಕ್ ಹಡಗು ಎರಡು ತುಂಡಾಗಿ ಸಮುದ್ರದಲ್ಲಿ ಮುಳುಗಿತ್ತು. ಆ ಸಮಯದಲ್ಲಿ, ಟೈಟಾನಿಕ್ ಮುಳುಗಡೆಯಾದ ಕಾರಣದಿಂದ 1500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಏಪ್ರಿಲ್ 10 ರಂದು, ಈ ಹಡಗು ಬ್ರಿಟನ್‌ನ ಸೌತಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿದ್ದು, ಅಪಘಾತಕ್ಕೆ ಬಲಿಯಾಗಿತ್ತು. ಇನ್ನು ಈ ಬೃಹತ್‌ ಹಡಗು ಮುಳುಗಿ ವರ್ಷಗಳೇ ಕಳೆದು ಹೋಗಿದ್ದರೂ ಇಂದಿಗೂ ಜನರು ಸಮುದ್ರದಲ್ಲಿರೋ ಈ ಹಡಗಿನ ಅವಶೇಷಗಳನ್ನ ನೋಡೋಕೆ ಸಬ್‌ಮರಿನ್‌ಗಳನ್ನ ಬಳಸಿ ನೋಡಲು ತೆರಳುತ್ತಾರೆ. ಈ ರೀತಿ ನೋಡೋಕೆ ಹೋಗಿರೋ ಜಲಾಂತರ್ಗಾಮಿ ನೌಕೆ ಒಂದು ಈಗ ಕಾಣೆಯಾಗಿದೆ. ಈ ಜಲಾಂತರ್ಗಾಮಿ ಒಂದು ಬಾರಿ 5 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಸಬ್‌ಮರೀನ್‌ ಮೂಲಕ ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸೋಕೆ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply