ಅದಾನಿ ಪ್ರಕರಣ ಕುರಿತ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದ ಅಮೆರಿಕದ ಬಿಲಿಯನೇರ್‌ ಜಾರ್ಜ್‌ ಸೊರೊಸ್‌!

masthmagaa.com:

ಗೌತಮ್‌ ಅದಾನಿ ಅವ್ರಿಂದ ಷೇರು ಮಾರುಕಟ್ಟೆಯಲ್ಲಿ ಉಂಟಾದ ತೊಂದ್ರೆಯಿಂದ ಪ್ರಧಾನಿ ಮೋದಿ ದುರ್ಬಲರಾಗಲಿದ್ದಾರೆ ಅಂತ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೊಸ್‌ ಹೇಳಿರೋದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅಷ್ಟೆ ಅಲ್ದೆ ಅದಾನಿ ವಿಷಯದಲ್ಲಿ ಮೋದಿ ಅವ್ರು ಮೌನವಾಗಿದ್ದಾರೆ. ಈ ಬಗ್ಗೆ ಜಾಗತಿಕ ಹೂಡಿಕೆದಾರರು ಮತ್ತು ಭಾರತದ ಸಂಸತ್ತಿನಲ್ಲಿ ಕೇಳೋ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡ್ಬೇಕಾಗುತ್ತೆ ಅಂತ ಜಾರ್ಜ್‌ ಹೇಳಿದ್ದಾರೆ. ಈ ಹೇಳಿಕೆಗೆ ಭಾರಿ ವಿರೋಧ ಕೇಳಿಬಂದಿದ್ದು, ಇದು ಭಾರತದ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ. ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶ ಮಾಡೋಕೆ ಪ್ರಯತ್ನ ಮಾಡೋ ವಿದೇಶಿ ಶಕ್ತಿಗಳಿಗೆ ನಾವೆಲ್ಲಾ ಒಟ್ಟಾಗಿ ಉತ್ತರ ನೀಡ್ಬೇಕು ಅಂತ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಅಲ್ದೇ ಇಂಗ್ಲೆಂಡ್ ಬ್ಯಾಂಕ್ ಅನ್ನು ದೋಚಿ ಆರ್ಥಿಕ ಯುದ್ಧ ಅಪರಾಧಿ ಅಂತ ಘೋಷಿಸಲಾಗಿರುವ ವ್ಯಕ್ತಿ ಈಗ ಭಾರತದ ಪ್ರಜಾಪ್ರಭುತ್ವವನ್ನು ಒಡೆಯುವ ಬಯಕೆ ವ್ಯಕ್ತಪಡಿಸಿದ್ದಾರೆ ಅಂತ ಇರಾನಿ ಹೇಳಿದ್ದಾರೆ. ಇತ್ತ ಸೊರೊಸ್‌ ಅವ್ರ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಅದಾನಿ ಮತ್ತು ಪ್ರಧಾನಿಗೆ ಸಂಬಂಧಿಸಿದ ಪ್ರಕರಣದಿಂದ ಭಾರತದ ಪ್ರಜಾಪ್ರಭುತ್ವದ ಪುನರುಜ್ಜೀವನ ಆಗುತ್ತೆ ಅನ್ನೋದು ಕಾಂಗ್ರೆಸ್‌ ಮೇಲೆ ಡಿಪೆಂಡ್‌ ಆಗಿದೆ. ಆದ್ರೆ ಅದಕ್ಕೂ ಜಾರ್ಜ್‌ ಸೊರೊಸ್‌ಗೂ ಯಾವುದೇ ಸಂಬಂಧ ಇಲ್ಲ ಅಂತ ಕಾಂಗ್ರೆಸ್‌ನವರು ಕೂಡ ಇದನ್ನ ಪರೋಕ್ಷವಾಗಿ ಖಂಡಿಸಿದ್ದಾರೆ. ಅಂದ್ಹಾಗೆ ಈ ಜಾರ್ಜ್‌ ಸೊರೊಸ್‌ ಅವ್ರು ಅಮೆರಿಕದ ಬಿಲಿಯನೇರ್‌ ಫಿಲಾಂತ್ರೊಪಿಸ್ಟ್ ಅಂದ್ರೆ ದಾನಿ,‌ ಹಾಗೂ Open Society Foundationನ ಫೌಂಡರ್‌ ಆಗಿದ್ದಾರೆ. ಭಾರತದಲ್ಲಿ ಬಲಪಂಥೀಯ ವಿಚಾರಧಾರೆ ವಿರುದ್ಧ ಅಭಿಯಾನಕ್ಕೆ ಫಂಡಿಂಗ್ ಮಾಡ್ತಾರೆ ಅನ್ನೋ ಆರೋಪ ಇವರ ಮೇಲಿದೆ.

-masthmagaa.com

Contact Us for Advertisement

Leave a Reply