ತಿರುಗಿ ಬಿದ್ದ ರಷ್ಯಾ! ಯುಕ್ರೇನ್‌ನ ಖೇರ್ಸಾನ್‌ ಮೇಲೆ ಭಯಾನಕ ದಾಳಿ! ಹತ್ತಾರು ನಾಗರೀಕರು ಧಾರುಣ ಸಾವು!

masthmagaa.com:

ರಷ್ಯಾ ಅಧ್ಯಕ್ಷ ಪುಟಿನ್‌ ಅರಮನೆ ಕ್ರೆಮ್ಲಿನ್‌ ಮೇಲೆ ಡ್ರೋನ್‌ ಅಟ್ಯಾಕ್‌ ನಂತರ ಯುಕ್ರೇನ್‌ ರಷ್ಯಾ ನಡುವಿನ ಯುದ್ದ ತೀವ್ರ ಗೊಂಡಿದೆ. ಇದೀಗ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸಿಯವರನ್ನ ಹತ್ಯೆ ಮಾಡೋದ್‌ ಬಿಟ್ಟು ನಮಗೆ ಬೇರೆ ದಾರಿ ಇಲ್ಲ ಅಂತ ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವಡೇವ್‌ ಹೇಳಿದ್ದಾರೆ. ಪುಟಿನ್‌ರ ಶಿಷ್ಯ ಅಂತ ಕರೆಸಿಕೊಳ್ಳುವ ಮೆಡ್ವಡೇವ್‌ ರಷ್ಯಾದಲ್ಲಿ ಪುಟಿನ್‌ ಬಳಿಕ ಎರಡನೇ ಪವರ್‌ಫುಲ್‌ ವ್ಯಕ್ತಿ ಅಂತ ಕರೆಸಿಕೊಂಡಿದ್ದು ಸಧ್ಯ ರಷ್ಯಾದ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಡೆಪ್ಯುಟಿ ಚೇರ್ಮನ್‌ ಅಗಿ ಕೆಲಸ ಮಾಡ್ತಿದ್ದಾರೆ. ಈ ಕೌನ್ಸಿಲ್‌ ರಷ್ಯಾದ ಸೇನೆ ಏನೇನ್‌ ಮಾಡಬೇಕು ಅನ್ನೊದನ್ನ ನಿರ್ಧಾರ ಮಾಡುವ ಸಮಿತಿಯಾಗಿದ್ದು ಈ ಸಮಿತಿಗೆ ರಷ್ಯಾದ ಅಧ್ಯಕ್ಷ ಪುಟಿನ್‌ ಚೇರ್ಮನ್.‌ ಈ ಡಿಮಿಟ್ರೆ ಮೆಡ್ವಡೇವ್‌ ಡೆಪ್ಯುಟಿ ಚೇರ್ಮನ್‌. ಅಂತವರ ಬಾಯಲ್ಲಿ ಈ ಮಾತು ಬಂದಿರೋದು ಜಾಗತಿಕವಾಗಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಈ ಕಡೆ ಯುಕ್ರೇನ್‌ ರಾಜಧಾನಿ ಕಿಯೇವ್‌ನಲ್ಲಿ ಸ್ಟೋಟ ನಡೆದಿದೆ. ರಷ್ಯಾದ ಅಧ್ಯಕ್ಷರ ಕಚೇರಿ ಮೇಲೆ ಯುಕ್ರೇನ್‌ ಡ್ರೋನ್‌ ದಾಳಿ ಮಾಡಿದೆ ಅನ್ನೋ ಆರೋಪ ಬಂದ ನಂತರ ಈ ಸ್ಫೋಟ ಸಂಭವಿಸಿದೆ. ಎಷ್ಟು ಹಾನಿಯಾಗಿದೆ, ಯಾವ ಕಡೆ ದಾಳಿಯಾಗಿದೆ ಅನ್ನೋದ್ರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಇನ್ನು ಈ ಸ್ಪೋಟಕ ಬೆನ್ನಲ್ಲೇ ಯುಕ್ರೇನ್‌ನಾದ್ಯಂತ ಯುದ್ದದ ಸೈರನ್‌ ಮೊಳಗಿದ್ದು ಅಲರ್ಟ್‌ ಜಾರಿಯಾಗಿದೆ. ಈ ಕಡೆ ಖೇರ್ಸಾನ್‌ ಭಾಗದಲ್ಲಿ ರಷ್ಯಾ ಭಯಾನಕ ದಾಳಿ ಮಾಡಿದೆ. ಆರಂಭಿಕ ಮಾಹಿತಿಯ ಪ್ರಕಾರ ಈ ದಾಳಿಯಲ್ಲಿ ಇದುವರೆಗೂ 21 ಜನ ನಾಗರಿಕರು ಸಾವನ್ನಪ್ಪಿದಾರೆ. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದೆಲ್ಲದ್ರ ಮಧ್ಯೆ ಅಮೆರಿಕ ಯುಕ್ರೇನ್‌ಗೆ ತನ್ನ ಸಹಾಯ ಹಸ್ತ ಮುಂದುವರೆಸಿದೆ. ಹೊಸದಾಗಿ 300 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 2,460 ಕೋಟಿ ರೂಪಾಯಿ ಮಿಲಿಟರಿ ಪ್ಯಾಕೇಜ್‌ ಅನೌನ್ಸ್‌ ಮಾಡಿದೆ.

-masthmagaa.com

Contact Us for Advertisement

Leave a Reply