ನೊಬೆಲ್‌ ಪುರಸ್ಕೃತೆಗೆ ಇನ್ನೈದು ವರ್ಷ ಜೈಲು? ಮಯನ್ಮಾರ್‌ನಲ್ಲಿ ಆಗ್ತಿರೋದೇನು?

masthmagaa.com:

ಮಯನ್ಮಾರ್‌ನ ಮಾಜಿ ಪ್ರಧಾನಿ, ನೊಬೆಲ್ ಶಾಂತಿ ಪುರಸ್ಕೃತೆ ಆಂಗ್‌ ಸಾನಿ ಸೂಕಿಗೆ ಅಲ್ಲಿನ ಕೋರ್ಟ್‌ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಅಂತ ವರದಿಯಾಗಿದೆ. 6 ಲಕ್ಷ ಡಾಲರ್‌ ಅಂದ್ರೆ ಸುಮಾರು 4 ಕೋಟಿ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಹಣವನ್ನ ಲಂಚವಾಗಿ ಪಡೆದಿದ್ದಾರೆ ಅನ್ನೋ ಆರೋಪದ ಮೇಲೆ ಅವರನ್ನ ಶಿಕ್ಷೆಗೆ ಗುರಿ ಮಾಡಲಾಗಿದೆ. ಈಗಾಗಲೇ ಹಲವು ಕೇಸ್‌ಗಳನ್ನ ಅವರ ಮೇಲೆ ಹೊರಿಸಲಾಗಿದ್ದು ಇದನ್ನ ಸೇರಿ ಈಗ ಸೂಕಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದಂತಾಗಿದೆ. ಅಂದ್ಹಾಗೆ ಮಯನ್ಮಾರ್‌ ಆಡಳಿತವನ್ನ ಸೇನೆ ತನ್ನ ಕಂಟ್ರೋಲ್‌ಗೆ ತೆಗೆದುಕೊಂಡ ಮೇಲೆ ಅಲ್ಲಿನ ಒಬ್ಬೊಬ್ಬರೇ ನಾಯಕರನ್ನ ಭ್ರಷ್ಟಾಚಾರ ಹಾಗು ಇನ್ನಿತರ ಆರೋಪ ಮಾಡಿ ಬಂಧಿಸಿ ಜೈಲಿಗಟ್ಟುತ್ತಿದ್ದು ಮತ್ತೂ ಕೆಲವರನ್ನ ಈಗಾಗಲೇ ಸೆರೆಮನೆಯಲ್ಲಿ ಕೂಡಿ ಹಾಕಿದೆ.

Contact Us for Advertisement

Leave a Reply