ಸಾಲದ ಬಿಕ್ಕಟ್ಟಿನಿಂದ ಆಸ್ಟ್ರೇಲಿಯಾ ಕ್ವಾಡ್‌ ಸಭೆ ಕ್ಯಾನ್ಸಲ್‌ ಮಾಡಿದ ಬೈಡೆನ್!

masthmagaa.com:

ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳುವ ಅಮೆರಿಕ ಸಾಲದ ಸುಳಿಗೆ ಸಿಲುಕಿ ವಿಲ ವಿಲ ಅಂತಿದೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಲ್ಲಿನ ವಿರೋಧ ಪಕ್ಷದ ಸದಸ್ಯರು, ಅಂದ್ರೆ ರಿಪಬ್ಲಿಕನ್‌ ಸದಸ್ಯರ ಜೊತೆ ಅಧ್ಯಕ್ಷ ಜೋ ಬೈಡೆನ್‌ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಇದೇ ತಿಂಗಳು ಮೇ 24ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ಕ್ವಾಡ್‌ ಶೃಂಗಸಭೆಗೆ ಹೋಗಬೇಕಿದ್ದ ಬೈಡೆನ್‌ ಟ್ರಿಪ್‌ ಕ್ಯಾನ್ಸಲ್‌ ಆಗಿದೆ. ಈಗಾಗಲೇ ಜಿ-7 ಸಭೆಗೆ ಜಪಾನ್‌ಗೆ ತೆರಳಿರುವ ಬೈಡೆನ್‌, ಅಲ್ಲಿಯೇ ಕ್ವಾಡ್‌ ಸಭೆಯನ್ನ ನಡೆಸೋಕೆ ಮುಂದಾಗಿದ್ದಾರೆ. ಹೀಗಾಗಿ ಮೊದಲ ಬಾರಿಗೆ ಕ್ವಾಡ್‌ ಶೃಂಗಸಭೆಯನ್ನ ಆಯೋಜಿಸೋಕೆ ಮುಂದಾಗಿದ್ದ ಆಸ್ಟ್ರೇಲಿಯಾದಲ್ಲಿ ಸಭೆ ನಡೆಯುತ್ತಿಲ್ಲ. ಅಲ್ದೇ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌, ಕ್ವಾಡ್‌ ರಾಷ್ಟ್ರಗಳಾದ ಭಾರತ ಹಾಗೂ ಜಪಾನ್ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಜಪಾನ್‌ನಲ್ಲಿ ಕ್ವಾಡ್‌ ದೇಶಗಳ ಶೃಂಗಸಭೆ ನಡೆಯೋದು ಬಹುತೇಕ ಖಚಿತವಾಗಿದೆ. ಇನ್ನು ಇತ್ತ ಜೂನ್‌ ವೇಳೆಗೆ ಅಮೆರಿಕ ತನ್ನ ಬಿಲ್‌ಗಳನ್ನ ಕಟ್ಟಲು ಆಗದ ಪರಿಸ್ಥಿತಿ ಬರುತ್ತೆ ಅಂತ ಅಲ್ಲಿನ ಟ್ರೆಶರಿ ಸೆಕ್ರಟರಿ ಜನೆಟ್‌ ಯಲೆನ್‌ ಹಲವು ಬಾರಿ ವಾರ್ನಿಂಗ್‌ ನೀಡಿದ್ದಾರೆ. ಜೊತೆಗೆ ಅಮೆರಿಕ ಸಂಸತ್ತು ಬೇಗನೇ ಸಾಲದ ಮಿತಿಯನ್ನ ತೆಗೆದು ಹಾಕಬೇಕು ಅಥ್ವಾ ಹೆಚ್ಚಿಸಬೇಕು ಅಂತ ಆಗ್ರಹಿಸಿದ್ದಾರೆ. ಆದ್ರೆ ಸಾಲದ ಮಿತಿಯನ್ನ ಹೆಚ್ಚಿಸಲು ಒಪ್ಪಿಗೆ ಸೂಚಿಸಬೇಕಾದ್ರೆ, ಅಮೆರಿಕ ತಾನು ಮಾಡ್ತಿರೊ ವೆಚ್ಚವನ್ನ ಕಡಿತಗೊಳಿಸಬೇಕು ಅಂತ ವಿರೋಧ ಪಕ್ಷ ರಿಪಬ್ಲಿಕನ್‌ ಸದಸ್ಯರು ಪಟ್ಟು ಹಿಡಿದಿದ್ದಾರೆ. ಈ ಕಡೆ ಸರಿಯಾದ ಟೈಮಲ್ಲಿ ನಿರ್ಧಾರ ತೆಗೆದುಕೊಳ್ಳಲಿಲ್ಲ ಅಂದ್ರೆ ಅಮೆರಿಕ ದಿವಾಳಿಯಾಗುತ್ತೆ. ಇಂಥ ಕ್ರುಷಿಯಲ್‌ ಟೈಮನ್ನ ತಮ್ಮ ಅಜೆಂಡಾಗಳಿಗೆ ರಿಪಬ್ಲಿಕನ್ನರು ಬಳಸಿಕೊಳ್ತಿದಾರೆ ಅಂತ ಆಡಳಿತಾರೂಢ ಡೆಮೊಕ್ರೇಟ್‌ಗಳು ಆರೋಪಿಸ್ತಿದಾರೆ.

-masthmagaa.com

Contact Us for Advertisement

Leave a Reply