ಮಸ್ಕ್‌ರನ್ನ ದುರಹಂಕಾರಿ ಅಂತ ಕರೆದ ಆಸ್ಟ್ರೇಲಿಯಾ ಪ್ರಧಾನಿ!

masthmagaa.com:

`X’ ಅಂದ್ರೆ ಟ್ವಿಟರ್‌ನ ಮುಖ್ಯಸ್ಥ ಎಲಾನ್‌ ಮಸ್ಕ್‌ರನ್ನ ಇದೀಗ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಎಲ್ಬನೀಸ್‌ ಅವ್ರು ʻದುರಹಂಕಾರಿ ಕೋಟ್ಯಾಧಿಪತಿʼ ಅಂತ ಕರೆದಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಸಿಡ್ನಿಯ ಚರ್ಚ್‌ ಒಂದ್ರಲ್ಲಿ ನಡೆದ ಚೂರಿ ಇರಿತದ ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಕೆಲ ಪೋಸ್ಟ್‌ಗಳನ್ನ ಹೈಡ್‌ ಮಾಡುವಂತೆ ಆಸ್ಟ್ರೇಲಿಯಾದ ಕೋರ್ಟ್‌ ಎಲಾನ್‌ ಮಸ್ಕ್‌ರ `X’ಗೆ ಆದೇಶ ನೀಡಿತ್ತು. ಇದಕ್ಕೊಪ್ಪದ `X’ ಕೇವಲ ಆಸ್ಟ್ರೇಲಿಯಾದಲ್ಲಿ ಮಾತ್ರ ಪೋಸ್ಟ್‌ಗಳನ್ನ ಹೈಡ್‌ ಮಾಡಿದೆ. ಆದ್ರೆ ʻಆಸ್ಟ್ರೇಲಿಯಾ ಹೊರತುಪಡಿಸಿ ಬೇರೆ ರಾಷ್ಟ್ರಗಳ ಯುಸರ್‌ಗಳಿಗೆ ಈ ಕಂಟೆಂಟ್‌ ಹೈಡ್‌ ಮಾಡಲ್ಲ. ಇದನ್ನ ಅಡ್ಡಿಪಡಿಸೋಕೆ ಆಸ್ಟ್ರೇಲಿಯಾಗೆ ಅಧಿಕಾರವಿಲ್ಲʼ ಅಂತ ಮಸ್ಕ್‌ ಹೇಳಿದ್ರು. ಹೀಗಾಗಿ ಮಸ್ಕ್‌ರ ಈ ವರ್ತನೆಗೆ ಕಿಡಿಕಾರಿದ ಆಸ್ಟ್ರೇಲಿಯಾದ ಪ್ರಧಾನಿ ಆಲ್ಬನೀಸ್‌, ʻಮಸ್ಕ್‌ರಿಗೆ ಸೊಕ್ಕು ತುಂಬಿದೆ, ಆತ ದುರಂಹಕಾರಿ ಬಿಲಯನೇರ್‌ ʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply