ಚೀನಾ ಅಧ್ಯಕ್ಷ ಜಿನ್‌ಪಿಂಗ್‌ರನ್ನ ಮೀಟ್‌ ಮಾಡೋದು ಪಾಸಿಟಿವ್‌ ಥಿಂಗ್‌: ಆಸ್ಟ್ರೇಲಿಯಾ ಪ್ರಧಾನಿ

masthmagaa.com:

ಮೂರನೇ ಬಾರಿಗೆ ಚೀನಾದ ಅಧ್ಯಕ್ಷ ಸ್ಥಾನವನ್ನ ಷಿ ಜಿನ್‌ಪಿಂಗ್‌ ಭದ್ರಪಡಿಸಿಕೊಂಡ ಮೇಲೆ ಕೆಲ ಜಾಗತಿಕ ನಾಯಕರು ಚೀನಾ ಪ್ರವಾಸಕ್ಕೆ ಮುಂದಾಗ್ತಿದಾರೆ. ಈಗಾಗಲೇ ಪಾಕ್‌ ಪ್ರಧಾನಿ ಹಾಗೂ ಕೆಲ ದಿನಗಳ ಹಿಂದೆ ಜರ್ಮನಿ ಚಾನ್ಸಲರ್‌ ಓಲಾಫ್ ಶಾಲ್ಜ್‌ ಚೀನಾಕ್ಕೆ ಹೋಗಿ ಜಿನ್‌ಪಿಂಗ್‌ರನ್ನ ಮೀಟ್‌ ಮಾಡಿದ್ರು. ಇದರ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಕೂಡ ಚೀನಾ ಪ್ರವಾಸಕ್ಕೆ ಮುಂದಾಗಿದ್ದಾರೆ. ಚೀನಾ ಅಧ್ಯಕ್ಷರನ್ನ ಮೀಟ್‌ ಮಾಡೋದು ಪಾಸಿಟಿವ್‌ ಥಿಂಗ್‌ ಅಂದ್ರೆ ಒಳ್ಳೆದು. ಈ ನಿಟ್ಟಿನಲ್ಲಿ ಹಲವು ಸಭೆಗಳನ್ನ ಆಯೋಜಿಸಲಾಗ್ತಿದೆ. ಆದ್ರೆ ಇನ್ನು ಫೈನಲ್‌ ಆಗಿಲ್ಲ ಅಂತ ಅಲ್ಬನೀಸ್‌ ಹೇಳಿದ್ದಾರೆ. ಜಿ20 ಶೃಂಗಸಭೆ ವೇಳೆ ಅಲ್ಬನೀಸ್‌ ಹಾಗೂ ಜಿನ್‌ಪಿಂಗ್‌ ಪರಸ್ಪರ ಸಭೆ ಮಾಡಲಿದ್ದಾರೆ ಅನ್ನೊ ಸುದ್ದಿಗಳು ಕೇಳಿ ಬಂದ ಹಿನ್ನಲೆ ಅಲ್ಬನೀಸ್‌ ಸ್ಪಷ್ಟನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply