ಅಯೋಧ್ಯೆಯ ಹೊಸ ಮಸೀದಿಯ ಶಂಕುಸ್ಥಾಪನೆ! ತಾಜ್‌ಮಹಲ್‌ಗಿಂತಲೂ ಸುಂದರ ಎಂದ ಬಿಜೆಪಿ ನಾಯಕ!

masthmagaa.com:

ಅಯೋಧ್ಯೆ ಬಳಿ ನಿರ್ಮಾಣವಾಗಲಿರೋ ನೂತನ ʻಮೊಹಮ್ಮದ್‌ ಬಿನ್‌ ಅಬ್ದುಲ್ಲಾʼ ಮಸೀದಿ ಶಂಕುಸ್ಥಾಪನೆಯನ್ನ ಮೆಕ್ಕಾದ ಇಮಾಮ್‌ ನೇರವೇರಿಸಲಿದ್ದಾರೆ ಅಂತ ತಿಳಿದು ಬಂದಿದೆ. ಇವರು ಮೆಕ್ಕಾದಲ್ಲಿರೋ ಕಾಬಾದ ಮಸೀದಿಯಲ್ಲಿ ನಮಾಜ್‌ ನಡೆಸಿಕೊಡ್ತಾರೆ. ಇನ್ನು ನೂತನ ಮಸೀದಿ ಬಗ್ಗೆ ಮಾತನಾಡಿರೋ ಬಿಜೆಪಿ ನಾಯಕ ಹಾಗೂ ಮೊಹ್ಮದ್‌ ಬಿನ್‌ ಅಬ್ದುಲ್‌ ಮಸೀದಿ ಕಮಿಟಿ ಮುಖ್ಯಸ್ಥ ಹಾಜಿ ಅರಾಫತ್‌ ಶೇಖ್‌, ʻಈ ಹೊಸ ಮಸೀದಿ ಭಾರತದ ಅತೀ ದೊಡ್ಡ ಮಸೀದಿ ಆಗಲಿದೆ. ಅಲ್ದೆ ಜಗತ್ತಿನ ಅತೀ ದೊಡ್ಡ ಕುರಾನ್‌ ಇಲ್ಲಿ ಇರಲಿದೆ. ಈ ಕುರಾನ್‌ನ ಸೈಜ್‌ 21 ಫೀಟ್‌ ಉದ್ದ ಮತ್ತು 36 ಫೀಟ್‌ ಅಗಲ ಇರಲಿದೆ. ಮಸೀದಿ ಹೊರತಾಗಿ, ಈ ಕಾಂಪ್ಲೆಕ್ಸ್‌ನಲ್ಲಿ ಕ್ಯಾನ್ಸರ್‌ ಆಸ್ಪತ್ರೆ, ಶಾಲೆ ಮತ್ತು ಕಾಲೇಜುಗಳು, ಮ್ಯುಸಿಯಂ, ಲೈಬ್ರರಿ ಮತ್ತು ಇಲ್ಲಿಗೆ ಬಂದವರಿಗೆ ಫ್ರೀ ಊಟ ನೀಡೋಕೆ ಸಂಪೂರ್ಣ ಸಸ್ಯಹಾರಿ ಅಡುಗೆ ಮನೆ ಕೂಡ ಇರಲಿದೆ ಅಂತ ಹೇಳಿದ್ದಾರೆ. ಜೊತೆಗೆ ಈ ಮಸೀದಿಯ ಪ್ರಮುಖ ಆಕರ್ಷಣೆಯಾಗಿ, ಒಂದು ದೊಡ್ಡ ಅಕ್ವೇರಿಯಂನ್ನ ಇಲ್ಲಿ ನಿರ್ಮಾಣ ಮಾಡಲಾಗುತ್ತೆ. ಮೊಹಮ್ಮದ್‌ ಬಿನ್‌ ಅಬ್ದುಲ್ಲಾ ಮಸೀದಿ ತಾಜ್‌ಮಹಲ್‌ಗಿಂತಲೂ ಸುಂದರವಾಗಿರಲಿದೆʼ ಅಂತ ಈ ಹಾಜಿ ಅರಾಫತ್‌ ಹೇಳಿದ್ದಾರೆ. ಅಂದ್ಹಾಗೆ ಅಯೋಧ್ಯೆ ಶ್ರೀರಾಮ ಮಂದಿರದ ಶಂಕುಸ್ಥಾಪನೆಯನ್ನ ಪಿಎಂ ಮೋದಿ ನೆರವೇರಿಸಿದ ಬೆನ್ನಲ್ಲೇ, ಅಯೋಧ್ಯೆಯ ಬಳಿ ನಿರ್ಮಾಣ ಆಗ್ತಿರೋ ಮಸೀದಿಯ ಶಂಕುಸ್ಥಾಪನೆ ಕೂಡ ಮೋದಿಯವ್ರೇ ನೆರವೇರಿಸ್ಬೇಕು ಅಂತ ಮುಸ್ಲಿಂ ನಾಯಕರು ಒತ್ತಾಯಿಸಿದ್ರು. ಆದ್ರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈಗ ಮೆಕ್ಕಾದ ಇಮಾಮ್‌ ಇದನ್ನ ನೆರವೇರಿಸಿಕೊಡಲಿದ್ದಾರೆ.

-masthmagaa.com

Contact Us for Advertisement

Leave a Reply