ಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಗೋಲ್‌ಮಾಲ್‌?

masthmagaa.com:

ಕೇಂದ್ರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರೋದು ಬೆಳಕಿಗೆ ಬಂದಿದೆ. ಈ ಯೋಜನೆಯ ಡೇಟಾಬೇಸ್‌ನಲ್ಲಿ ಹಲವು ಲೋಪಗಳು ಕಂಡು ಬಂದಿದ್ದು, ಅನರ್ಹ ಫಲಾನುಭವಿಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ದೃಢೀಕರಣ ನಿಯಂತ್ರಣ ವ್ಯವಸ್ಥೆಯಲ್ಲಿನ ಲೋಪದಿಂದಾಗಿ ವ್ಯತ್ಯಾಸ ಉಂಟಾಗಿದೆ ಅಂತ ಕಂಟ್ರೋಲರ್‌ ಅಂಡ್‌ ಆಡಿಟರ್‌ ಜನರಲ್‌ ನಡೆಸಿದ ಪರಿಶೋಧನ ವರದಿಯಲ್ಲಿ ತಿಳಿಸಲಾಗಿದೆ. ಅಷ್ಟೆ ಅಲ್ದೆ ಈಗಾಗಲೇ ಮರಣ ಹೊಂದಿರುವವರ ಹೆಸರಿನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಅಂತ ವರದಿಯಲ್ಲಿ ಗೊತ್ತಾಗಿದೆ. ಜೊತೆಗೆ ಒಂದೇ ನಂಬರ್‌ನಿಂದ ಸುಮಾರು 7 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಹೆಸರನ್ನ ರಿಜಸ್ಟರ್‌ ಮಾಡಿರೋದು ಬಹಿರಂಗವಾಗಿದೆ.

-masthmagaa.com

Contact Us for Advertisement

Leave a Reply