ಇಂದಿನಿಂದ ಒಟಿಟಿಗೆ ಬರಲಿದೆ ಬೆಬಿ ಸಿನಿಮಾ !

masthmagaa.com:

ಯುವ ನಟ ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ನಾಯಕಿಯಾಗಿ ನಟಿಸಿದ್ದ ಇತ್ತೀಚಿನ ಚಿತ್ರ ಬೇಬಿ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್‌ ಪಡೆದುಕೊಂಡಂತ ಚಿತ್ರ. ಸಾಯಿ ರಾಜೇಶ್‌ ನಿರ್ದೇಶಿದ ಈ ಚಿತ್ರದಲ್ಲಿ ವಿರಾಜ್ ಅಶ್ವಿನ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಎಸ್‌ಕೆಎನ್ ನಿರ್ಮಿಸಿರುವಂತ ಬೆಬಿ ಸಿನಿಮಾದ ಹಾಡುಗಳು ಈಗಾಗಲೇ ಸಖತ್‌ ವೈರಲ್‌ ಆಗಿದೆ.

ಉತ್ತಮ ನಿರೀಕ್ಷೆಗಳನ್ನ ಇಟ್ಕೊಂಡು ಬೆಬಿ ಸಿನಿಮಾ ಜುಲೈ 14ಕ್ಕೆ ಗ್ರ್ಯಾಂಡ್ ರಿಲೀಸ್ ಆಗಿದೆ. ರಿಲೀಸ್‌ ಆದಮೇಲೆ ಜನರಿಂದ ಒಳ್ಳೆ ಪ್ರಶಂಸೆಯನ್ನೂ ಸಹ ಪಡೆದುಕೊಂಡಿತ್ತು. 10 ಕೋಟಿಗಿಂತ ಕಡಿಮೆ ಬಜೆಟ್‌ನಲ್ಲಿ ರೆಡಿಯಾದ ಈ ಸಿನಿಮಾ ಇದುವರೆಗೆ ರೂ. 90 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ಸೈ ಎನಿಸಿಕೊಂಡಿದೆ. ಈ ಸಿನಿಮಾ ಯಂಗ್‌ ಜನರೇಷನ್‌ಗಳಿಗೆ ಚೆನ್ನಾಗಿ ಕನೆಕ್ಟ್ ಆಗೋದ್ರಿಂದ ರಿಪೀಟ್ ಆಡಿಯನ್ಸ್ ಬರ್ತಾ ಇದ್ದಾರೆ.

ಇತ್ತೀಚಿನ ಈ ಬೆಬಿ ಸಿನಿಮಾ OTT ನಲ್ಲಿ ರಿಲೀಸ್‌ ಆಗಿದೆ. ಥಿಯೇಟರ್ ರನ್ ಬಹುತೇಕ ಪೂರ್ಣಗೊಳಿಸಿರುವ ಬೇಬಿ ಇಂದಿನಿಂದ (ಆಗಸ್ಟ್ 25) ಜನಪ್ರಿಯ OTT ಮಾಧ್ಯಮ ಆಹಾದಲ್ಲಿ ಪ್ರಸಾರವಾಗ್ತಾ ಇದೆ. ಥೇಟರ್‌ನಲ್ಲಿ ನೋಡದೇ ಇರುವವರು, ಅಥವಾ ಆಲ್‌ರೆಡಿ ನೋಡಿದವ್ರೂ ಕೂಡ ಒಟಿಟಿಯಲ್ಲಿ ನೋಡಬಹುದಾಗಿದೆ.

-masthmagaa.com

Contact Us for Advertisement

Leave a Reply