ಕೋವಿಡ್‌ ಚಿಕಿತ್ಸೆಯಿಂದ 6 ತಿಂಗಳ ಮಗುವಿನ ಕಣ್ಣಿನ ಕಲರ್‌ ಚೇಂಜ್!

masthmagaa.com:

ಕೋವಿಡ್‌-19 ಚಿಕಿತ್ಸೆಯನ್ನ ಪಡೆದುಕೊಂಡಿದ್ದ 6 ತಿಂಗಳ ಮಗುವಿನ ಐ ಬಾಲ್‌ ಅಥ್ವಾ ಕಣ್ಣು ಗುಡ್ಡೆಯ ಕಲರ್‌ ಚೇಂಜ್‌ ಆಗಿರೊ ಘಟನೆ ಥೈಲೆಂಡ್‌ನಲ್ಲಿ ನಡೆದಿದೆ. ಈ ಮಾಹಿತಿ ಮೆಡಿಕಲ್‌ ಜರ್ನಲ್‌ ಆದ ʻಫ್ರಂಟಿಯರ್ಸ್‌ ಇನ್‌ ಪಿಡಿಯಾಟ್ರಿಕ್ಸ್‌ʼನಲ್ಲಿ ಪಬ್ಲಿಶ್‌ ಆಗಿದೆ. ಮಗುವಿನಲ್ಲಿ ಕೋವಿಡ್‌ನ ಗುಣಲಕ್ಷಣಗಳು ಕಾಣಿಸಿಕೊಂಡಿದ್ದು, favipiravir ಔಷಧಿ ನೀಡಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಆದ್ರೆ ಔಷಧಿ ನೀಡಿದ 18 ಗಂಟೆಗಳ ಬಳಿಕ ಮಗುವಿನ ತಾಯಿ ಅದರ ಕಣ್ಣಿನ ಕಲರ್‌ ಚೇಂಜ್‌ ಆಗೋದನ್ನ ಗುರುತಿಸಿದ್ದಾರೆ. ಚಿಕಿತ್ಸೆಗೂ ಮೊದಲು ಡಾರ್ಕ್‌ ಬ್ರೌನ್‌ ಇದ್ದ ಕಲರ್‌ ಚಿಕಿತ್ಸೆ ಬಳಿಕ ನೀಲಿ ಕಲರ್‌ ಆಗಿದೆ ಅಂತ ಹೇಳಲಾಗಿದೆ. ಈ ಬದಲಾವಣೆ ಕಂಡು ಬಂದ ತಕ್ಷಣ ಮಗುವಿಗೆ ನೀಡ್ತಿದ್ದ ಚಿಕಿತ್ಸೆಯನ್ನ ಸ್ಟಾಪ್‌ ಮಾಡಲಾಗಿತ್ತು. ಚಿಕಿತ್ಸೆ ನಿಲ್ಲಿಸಿದ 5 ದಿನಗಳ ಬಳಿಕ ಮತ್ತೆ ಮಗುವಿನ ಕಣ್ಣಿನ ಕಲರ್‌ ಮೊದಲಿದ್ದ ಬ್ರೌನ್‌ ಕಲರ್‌ಗೆ ಮರಳಿದೆ ಅಂತ ಜರ್ನಲ್‌ನಲ್ಲಿ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply