ಅದಾನಿ ವಿವಾದ: ಸರ್ಕಾರದ ಸಲಹೆಯನ್ನ ತಿರಸ್ಕರಿಸಿದ ಸುಪ್ರೀಂಕೋರ್ಟ್‌

masthmagaa.com:

ಅದಾನಿ ಗ್ರೂಪ್ ವಿವಾದದ ವಿಚಾರದಲ್ಲಿ ಸಮಿತಿಯೊಂದರ ರಚನೆಗೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರೊ ಪ್ರಸ್ತಾಪವನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳು ಪಾತಾಳಕ್ಕೆ ಕುಸಿದು ಹೋಗಿ ಪರದಾಡುತ್ತಿರುವ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ತಜ್ಞರ ಸಮಿತಿಯನ್ನ ರಚಿಸೋಕೆ ಸರ್ವೋಚ್ಚ ನ್ಯಾಯಾಲಯವೇ ಸೂಚಿಸಿತ್ತು. ಅದರಂತೆ ಕೇಂದ್ರ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ತನ್ನ ಸಲಹೆಯನ್ನು ಕೋರ್ಟ್​ಗೆ ಸಲ್ಲಿಸಿದೆ. ಈ ವೇಳೆ ಅದಾನಿ ವಿಚಾರದಲ್ಲಿ ಎಲ್ಲವೂ ಪಾರದರ್ಶಕವಾಗಿ ಇರಲಿ. ಮುಚ್ಚಿದ ಲಕೋಟೆ ನೀಡೋದು ಬೇಡ ಅಂತ ಕೇಂದ್ರಕ್ಕೆ ತಿಳಿಸಿದೆ. ಹಾಗೂ ಇದೇ ವೇಳೆ ನಿಮ್ಮ ಸಜೆಶನ್‌ಗಳನ್ನ ಅಕ್ಸೆಪ್ಟ್‌ ಮಾಡಿದ್ರೆ, ಅದು ಸರ್ಕಾರ ನೇಮಕ ಮಾಡಿರೋ ಸಮಿತಿ ಆಗುತ್ತೆ. ಅದು ನಮಗೆ ಬೇಡ, ಸಮಿತಿ ರಚನೆ ನಿರ್ಧಾರವನ್ನ ನಮಗೆ ಬಿಡಿ ಅಂತ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply