10 ವರ್ಷದ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಇಟಲಿ ಪ್ರಧಾನಿ! ಕಾರಣವೇನು?

masthmagaa.com:

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ತಮ್ಮ ಪತಿ ಜೊತೆಗಿನ 10 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಮೆಲೋನಿ ಪತಿ ಟಿವಿ ಜರ್ನಲಿಸ್ಟ್‌ ಆಂಡ್ರಿಯಾ ಗಿಯಾಂಬ್ರುನೊ ಅವರು ಟೆಲಿವಿಷನ್‌ ಶೋ ಒಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಾಮೆಂಟ್‌ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಪತಿಯ ವಿವಾದಾತ್ಮಕ ಹೇಳಿಕೆ ಹಾಗೂ ಮಹಿಳಾ ಸಹೋದ್ಯೋಗಿಗಳ ಜೊತೆ ಅಸಭ್ಯ ವರ್ತೆನೆ ಕಾರಣಕ್ಕೆ ಮೆಲೋನಿ ವಿಚ್ಛೇದನ ಕೊಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮೆಲೋನಿ, ಕೆಲ ಸಮಯದಿಂದ ನಮ್ಮಿಬ್ಬರ ಹಾದಿ ಭಿನ್ನವಾಗಿದ್ದು, ಅದನ್ನ ಒಪ್ಪಿಕೊಳ್ಳುವ ಟೈಮ್‌ ಬಂದಿದೆ. ಹೀಗಾಗಿ ನಮ್ಮ 10 ವರ್ಷಗಳ ದಾಂಪತ್ಯವನ್ನ ಎಂಡ್‌ ಮಾಡ್ತಿದ್ದೀವಿ ಅಂತ ತಿಳಿಸಿದ್ದಾರೆ. ಅಂದ್ಹಾಗೆ ಅಂಡ್ರಿಯಾ ಇತ್ತೀಚೆಗೆ ತಮ್ಮ ನಿರೂಪಣೆಯ ವೇಳೆ ಅಸಭ್ಯ ಭಾಷೆಗಳನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಪ್ರಸಾರದ ವೇಳೆಯೇ ಅವರು ತಮ್ಮ ಮಹಿಳಾ ಸಹೋದ್ಯೋಗಿಯ ಜೊತೆಗೆ ಪ್ಲರ್ಟ್ ಮಾಡಿದ್ದರು. ಅಷ್ಟೆ ಅಲ್ದೆ ಕಳೆದ ಆಗಸ್ಟ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕುರಿತೂ ಆಂಡ್ರಿಯಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಕಾರಣಗಳಿಂದ ಮೆಲೋನಿ ತಮ್ಮ ಪತಿಗೆ ಡಿವೋರ್ಸ್‌ ಕೊಟ್ಟಿದ್ದು, ಈ ದಂಪತಿಗೆ 7 ವರ್ಷದ ಮಗಳಿದ್ದಾಳೆ.

-masthmagaa.com

Contact Us for Advertisement

Leave a Reply