ಕುಸ್ತಿಪಟುಗಳ ಪ್ರತಿಭಟನೆ: ನನ್ನ ವಿರುದ್ಧ ಕಾಂಗ್ರೆಸ್‌ ಮಾಡ್ತಿರುವ ಪಿತೂರಿ ಎಂದ ಬ್ರಿಜ್‌ ಭೂಷಣ್‌

masthmagaa.com:

ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯು ಹಿಂದೆ ಕಾಂಗ್ರೆಸ್‌ ಹಾಗೂ ಕುಸ್ತಿಪಟು ಭಜರಂಗ್‌ ಪುನಿಯಾ ಪಿತೂರಿಯಿದೆ ಅಂತ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ WFI ಮುಖ್ಯಸ್ಥ ಬ್ರಿಜ್‌ ಭೂಷಣ್‌ ಸಿಂಗ್‌ ಆರೋಪಿಸಿದ್ದಾರೆ. ಈ ಸಂಪೂರ್ಣ ಪಿತೂರಿ ನಡೆಸಿರುವುದು ಕಾಂಗ್ರೆಸ್‌ ನಾಯಕ ದೀಪೇಂದರ್‌ ಹೂಡ ಹಾಗೂ ಕುಸ್ತಿಪಟು ಭಜರಂಗ್‌ ಪುನಿಯಾ. ಈ ಪಿತೂರಿಯನ್ನ ಸಾಭೀತುಪಡಿಸಲು ಬೇಕಾದ ಅಗತ್ಯ ಆಡಿಯೋ ಕ್ಲಿಪ್‌ ನಮ್ಮ ಬಳಿಯಿದ್ದು, ಸಮಯ ಬಂದಾಗ ಅದನ್ನ ದೆಹಲಿ ಪೊಲೀಸರಿಗೆ ನೀಡ್ತೀವಿ ಅಂತ ಬ್ರಿಜ್‌ ಭೂಷಣ್‌ ತಿಳಿಸಿದ್ದಾರೆ. ಇತ್ತ ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಮಹಿಳಾ ಕುಸ್ತಿಪಟುಗಳಿಗೆ ಸೂಕ್ತ ಭದ್ರತೆ ವಹಿಸಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ. ಇನ್ನೊಂದ್‌ ಕಡೆ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಧು ತಮ್ಮ ಬೆಂಬಲ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply