ಬಡವ ರಾಸ್ಕಲ್ ಸಿನಿಮಾ ವಿಮರ್ಶೆ!

masthmagaa.com:
ಟಗರು, ಯುವರತ್ನ, ಯಜಮಾನ, ಪಾಪ್ ಕಾರ್ನ್ ಮಂಕಿ ಟೈಗರ್, ರತ್ನನ್ ಪರ್ಪಂಚ ಈಗ ಬಡವ ರಾಸ್ಕಲ್. ಈ ಎಲ್ಲ ಚಿತ್ರಗಳ ಸಬ್ಜೆಕ್ಟ್ ನಲ್ಲಿ ಎಷ್ಟು ವೆರಿಯೇಷನ್ ಇದ್ದಿಯೋ ಡಾಲಿ ಧನಂಜಯ್ ಅವರ ಸಿನಿಮಾ ಕ್ಯಾರಿಯರ್ ನಲ್ಲಿ ಕೂಡ ಅಷ್ಟೇ ವೆರಿಯೇಷನ್ ಇದೆ ಅಂತ ಹೇಳಬಹುದು. ನಾನೊಬ್ಬ ನಟ ಅನ್ನಿಸಿಕೊಳ್ಳೋಕೆ ಇಷ್ಟ ಪಡ್ತೀನಿ ಅಂತ ಬಾಯಿ ಮಾತಲ್ಲಿ ತುಂಬಾ ಹೀರೋಗಳು ಹೇಳ್ತಾರೆ. ಆದ್ರೆ ಡಾಲಿ ಧನಂಜಯ್ ಅದನ್ನ ಪ್ರತೀ ಬಾರಿ ಪ್ರೂವ್ ಮಾಡ್ತಾ ಇದ್ದಾರೆ. ಪ್ರತೀ ಪ್ರಯತ್ನದಲ್ಲೂ ಗೆಲ್ಲುತ್ತಾನೆ ಇದ್ದಾರೆ.
ಅವರ ಪ್ರಯತ್ನದ ಮುಂದುವರಿದ ಭಾಗಾನೇ ಈ ಬಡವ ರ್ಯಾಸ್ಕಲ್. ಒಂದು ಮಾಧ್ಯಮ ವರ್ಗದ ಯುವಕ, ಆತನ  ಫ್ರೆಂಡ್ಸ್, ಲವ್, ಅಪ್ಪ ಅಮ್ಮ, ವಯಸ್ಸಿನ ಹುಡುಗರು ಮಾಡುವ ನಾರ್ಮಲ್ ಎಡವಟ್ಟುಗಳು, ಗುರಿ, ಸೋಲು, ಗೆಲುವು, ಜೀವನ ಇದೆಲ್ಲ ಇರುವ ಒಬ್ಬ ಸೀದಾ ಸಾದ ಹುಡುಗನಾಗಿ, ಮಿಡ್ಲ ಕ್ಲಾಸ್ ಹುಡುಗರ ರೆಪ್ರೆಸೆಂಟೇಟಿವ್ ಆಗಿ… ಅದೇ ಪಕ್ಕದ ಮನೆ ಹುಡುಗ ಅಂತೀವಲ್ಲ ಆ ರೀತಿ ಧನಂಜಯ್ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಅವರ ಕಾಮೆಡಿ ಟೈಮಿಂಗ್, ಎಮೋಷನಲ್ ದೃಶ್ಯಗಳು, ಫೈಟ್ಸ್ ಬಹುತೇಕ ಎಲ್ಲ ಡಿಪಾರ್ಟ್ಮೆಂಟ್ ಅಲ್ಲು ನಾನ್ಯಾಕೆ ನಟ ರಾಕ್ಷಸ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.
.ಸಿನಿಮಾದ ಸ್ಕ್ರೀನ್ ಪ್ಲೇ ಈ ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್. ನಾಯಕನ ಇವತ್ತಿನ ಸ್ಥಿತಿಗೆ ಕಾರಣ ಏನು ಅನ್ನೋದು ಇಡೀ ಸಿನಿಮಾದಲ್ಲಿ ಎಳೆ ಎಳೆ ಯಾಗಿ ಒಂಚೂರು ಬೋರ್ ಹೊಡೆಸದೇ ತೆರೆದುಕೊಳ್ಳುತ್ತಾ ಹೋಗತ್ತೆ. ಕಚಗುಳಿ ಇಡುವ ಡೈಲಾಗ್ಸ್, ವೇಗವಾದ ಚಿತ್ರಕಥೆ ಜೊತೆಗೆ ಸಿನಿಮಾದಲ್ಲಿ ನಟಿಸಿರುವ ಪ್ರತಿಯೊಬ್ಬರ ನಟನೆ ತುಂಬಾ ನೈಜವಾಗಿದೆ. ಹಾಗೆ ಸಿನಿಮಾ ನೋಡುವಾಗ ಇದು ನಿಜವಾಗ್ಲು ನಡಿತಾ ಇದೆ ಏನೋ ಅನ್ನುವಷ್ಟರ ಮಟ್ಟಿಗೆ ನೈಜತೆ ಇದೆ. ಚಿತ್ರದಲ್ಲಿ ಧನಂಜಯ್ ಸ್ನೇಹಿತನ ಪಾತ್ರ ಮಾಡಿರುವ ನಾಗಭೂಷಣ ಮತ್ತು ಆ ಪುಡಿ ರೌಡಿಗಳ ಗ್ಯಾಂಗ್ನ ಸದಸ್ಯರು ಎಲ್ಲರೂ ಚೆನ್ನಾಗಿ ಆಕ್ಟ್ ಮಾಡಿದ್ದಾರೆ.
ತಾರ ಮತ್ತು ರಂಗಾಯಣ ರಘು  ತಮ್ಮ ಪಾತ್ರವನ್ನ ಅಕ್ಷರಶಃ ಜೀವಿಸಿದ್ದಾರೆ. ತಾರಾ ಮತ್ತು ರಂಗಾಯಣ ರಘು ಅವರ ಕಾಮೆಡಿ ಟೈಮಿಂಗ್ ಎಷ್ಟು ನಗು ತರಿಸುತ್ತೋ ಎಮೋಷನಲ್ ದೃಷ್ಯಗಳಲ್ಲಿ ಅವರ ನಟನೆ ಎಂಥ ಗಟ್ಟಿ ಮನಸಿದ್ದವರಿಗೂ ಒಂದು ಕ್ಷಣ ಟ್ರಾನ್ಸ್ ಗೆ ಹೊರಟು ಹೋಗುವ ಹಾಗೆ ಮಾಡತ್ತೆ. ಅವರಿಬ್ಬರ ಅನುಭವ ಈ ಚಿತ್ರಕ್ಕೆ ಒಂದು ದೊಡ್ಡ ಪ್ಲಸ್.
ಲೈಫ್ ಅನ್ನ ಅಷ್ಟೇನೂ ಸೀರಿಯಸ್ ಆಗಿ ತೆಗೆದುಕೊಳ್ಳದ ಹುಡುಗನಿಗೆ ಲವ್ ಇರತ್ತೆ. ಆ ಲವ್ ಸಕ್ಸಸ್ ಆಗುತ್ತಾ ಇಲ್ವಾ ಅನ್ನೋದನ್ನ ನೀವು ಈ ಸಿನಿಮಾ ನೋಡಿ ತಿಲ್ಕೊಬೇಕು. ತಕ್ಕ ಮಟ್ಟಿಗೆ ಓದಿದ್ರು ಕೂಡ ತಂದೆ ತಾಯಿಯರಿಗೆ ಹೊರೆಯಾಗಿ ಜೀವನದಲ್ಲಿ ಇನ್ನೂ ಏನು ಸಾದನೆ ಮಾಡಿರದ ಬಡವ ರಾಸ್ಕಾಲ ಯಾವ ರೀತಿ ತನಗೆ ಆದ ನಷ್ಟವನ್ನ ರೀತಿ ಭರಿಸ್ತಾನೆ. ಅವನು ಜೀವನದಲ್ಲಿ ಗೆಲ್ತಾನ ಇಲ್ವಾ ಅಂತ ಗೊತ್ತಾಗಬೇಕಾದರೆ ನೀವೆಲ್ಲ ಸಿನಿಮಾ ನೀಡಬೇಕು.
ಕೋರಿಯರ್ ಬಾಯ್ ಆಗಿದ್ದ ಶಂಕರ್ ಗುರು ಈ ಸಿನಿಮಾಗೆ ಸ್ಟೋರಿ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಇರುವ ಈ ಚಿತ್ರದ 2 ಹಾಡುಗಳು ಈಗಾಗಲೇ ಹಿಟ್ ಆಗಿದೆ. ಎರಡು ಹಾಡುಗಳು ಧನಂಜಯ್ ಅವರೇ ಬರೆದಿದ್ದಾರೆ. ಚಿತ್ರದ ನಾಯಕಿ ಅಮೃತ ಐಯ್ಯೆಂಗರ್ ತಮಗೆ ಕೊಟ್ಟಿರುವ ಪಾತ್ರವನ್ನ ಚೆನ್ನಾಗಿ ನಿಭಾಯಿಸಿದ್ದಾರೆ.
ಒಂದು ಔಟ್ ಅಂಡ್ ಔಟ್ ಕಮರ್ಶಿಯಲ್ ಎಂಟರ್ಟೈನರ್ ಸಿನಿಮಾದಲ್ಲಿ ತಪ್ಪುಗಳು ಇಲ್ವೇ ಇಲ್ಲ ಅಂತ ಹೇಳಕ್ಕಾಗಳಲ್ಲ ಆದ್ರೇ ಅದೆಲ್ಲ ತುಂಬಾ ಚಿಕ್ಕ ತಪ್ಪುಗಳು ಹಾಗೆ ಇಡೀ ಸಿನಿಮಾ ಚೆನ್ನಾಗಿರುವಾಗ ಆ ಚಿಕ್ಕ ಚಿಕ್ಕ ತಪ್ಪುಗಳು ಗಮನಕ್ಕೂ ಬರೋದಿಲ್ಲ ಅದನ್ನ ನೆಗೆಟಿವ್ ಅಂತಾನೂ ಹೇಳೋಕೆ ಆಗಲ್ಲ. ಒಟ್ನಲ್ಲಿ ಒಂದೊಳ್ಳೆ ಕನ್ನಡ ಸಿನಿಮಾ ಇಡೀ ಫ್ಯಾಮಿಲಿ ಜೊತೆ ನೋಡೋ ಅಂತ ಸಿನಿಮಾ ನೋಡಬೇಕು ಅಂತ ನೀವೇನಾದರೂ ಪ್ಲಾನ್ ಮಾಡ್ತಾ ಇದ್ರೆ ಬಡವ ರಾಸ್ಕಲ್ ಸಿನಿಮಾ ನೋಡಬಹುದು.
-masthmagaa.com
Contact Us for Advertisement

Leave a Reply