ಬ್ಯಾಲನ್‌ ಡಿʻಓರ್‌ 2023: ಪುಟ್ಬಾಲ್‌ ಲೋಕದಲ್ಲಿ ಇತಿಹಾಸ ಸೃಷ್ಟಿಸಿದ ಮೆಸ್ಸಿ!

masthmagaa.com:

ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಅವ್ರು ಸತತ 8ನೇ ಬಾರಿಗೆ ಬ್ಯಾಲನ್‌ ಡಿʻಓರ್‌ ಅವಾರ್ಡ್‌ನ್ನ ಪಡೆದು ಇತಿಹಾಸವನ್ನ ಸೃಷ್ಟಿಸಿದ್ದಾರೆ. ಇಡೀ ಜಗತ್ತಲ್ಲಿ ಅತ್ಯುತ್ತಮ ಫುಟ್‌ಬಾಲ್‌ ಆಟಗಾರರನ್ನ ಗುರುತಿಸಿ, ಅವ್ರಿಗೆ ಪ್ರಶಸ್ತಿ ಪ್ರಧಾನ ಮಾಡೋ ಆವಾರ್ಡ್‌ ಸಮಾರಂಭವೇ ಈ ಬ್ಯಾಲನ್‌ ಡಿʻಓರ್‌. ಅಕ್ಟೋಬರ್‌ 30 ರಂದು ಅಂದ್ರೆ ನೆನ್ನೆ ಪ್ಯಾರಿಸ್‌ನಲ್ಲಿ ನಡೆದ ಬ್ಯಾಲನ್‌ ಡಿʻಓರ್‌ 2023 ಫ್ರಾನ್ಸ್‌ ಫುಟ್‌ಬಾಲ್‌ ಅವಾರ್ಡ್‌ ಸಮಾರಂಭದಲ್ಲಿ ʻಬ್ಯಾಲನ್‌ ಡಿʻಓರ್‌ʼ ಮುಡಿಗೇರಿಸಿಕೊಂಡು ಫುಟ್ಬಾಲ್‌ ಕ್ರೀಡೆಯಲ್ಲಿ ಹೊಸ ದಾಖಲೆಯನ್ನ ಮಾಡಿದ್ದಾರೆ. ಇನ್ನು ಇವ್ರೊಂದಿಗೆ ಮ್ಯಾಂಚೆಸ್ಟರ್ ಸಿಟಿಯ ಫುಟ್ಬಾಲ್ ತಾರೆ ಎರ್ಲಿಂಗ್ ಹಾಲೆಂಡ್ ಎರಡನೇ ಸ್ಥಾನ ಪಡೆದಿದ್ದಾರೆ. ಲಿಯೋನೆಲ್ ಮೆಸ್ಸಿಯ ಮಾಜಿ PSG ತಂಡದ ಸಹ ಆಟಗಾರ ಕಿಲಿಯನ್ ಎಂಬಪ್ಪೆ ಮೂರನೇ ಸ್ಥಾನ ಪಡೆದಿದ್ದಾರೆ. ಅಂದ್ಹಾಗೆ ಲಿಯೋನೆಲ್‌ ಮೆಸ್ಸಿ ಈ ಹಿಂದೆ 2009, 2010, 2011, 2012, 2015, 2019, 2021 ಮತ್ತು ಇದೀಗ 2023 ರಲ್ಲಿ ಬ್ಯಾಲನ್‌ ಡಿʻಓರ್‌ ಅವಾರ್ಡ್‌ ತನ್ನದಾಗಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply