ಬಾಂಗ್ಲಾ ಚುನಾವಣೆಗೆ ಪೂರ್ವ ಸಿದ್ಧತೆ! ಭದ್ರತಾ ಪಡೆಗಳ ನಿಯೋಜನೆ!

masthmagaa.com:

ಬಾಂಗ್ಲಾದಲ್ಲಿ ಜನವರಿ 7 ರಂದು ನಡೆಯಲಿರೋ ಚುನಾವಣೆಗೆ ಇದೀಗ ಭಾರೀ ಸಿದ್ಧತೆಯನ್ನ ಮಾಡಲಾಗ್ತಿದೆ. ಅಲ್ಲಿನ ವಿಪಕ್ಷ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (BNP) ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದೆ. ಆದ್ರಿಂದ ಗಲಭೆ ಹಿಂಸಾಚಾರಗಳು ಹೆಚ್ಚಾಗ್ಬೋದು ಅಂತ ದೇಶಾದ್ಯಂತ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದೆ. ಶಾಂತಿ ಮತ್ತು ಭದ್ರತೆ ಕಾಪಾಡೋಕೆ ಢಾಕಾದಲ್ಲಿ ಸೈನಿಕರು ತಾತ್ಕಾಲಿಕ ಕ್ಯಾಂಪ್‌ಗಳನ್ನ ಸೆಟಪ್‌ ಮಾಡಿದ್ದಾರೆ. ಅಲ್ಲಿನ ಕರಾವಳಿ ಭಾಗದಲ್ಲಿರೋ ಜಿಲ್ಲೆಗಳಲ್ಲಿ ನೌಕಾ ಪಡೆಯನ್ನ ನಿಯೋಜಿಸಲಾಗಿದೆ. ಇನ್ನು ಗುಡ್ಡಗಾಡು ಪ್ರದೇಶಗಳ ಮತಗಟ್ಟೆಗಳಿಗೆ ವಾಯು ಪಡೆಯನ್ನ ನಿಯೋಜಿಸಲಾಗಿದೆ. ಎಲ್ಲಿ ಚುನಾವಣೆ ನಡೆದ ನಂತರ ಮತ್ತೇ ಹಿಂಸಾಚಾರಗಳು ನಡೆದು ಬಿಡುತ್ತೆ ಅಂತ ಅಲ್ಲಿನ ಜನರು ಇದೀಗ ಭಯ ಪಡ್ತಿದ್ದಾರೆ. ಆದ್ರಿಂದ ಚುನಾವಣೆ ದಿನ ಬಾಂಗ್ಲಾದಲ್ಲಿ ಯಾವ್ದೇ ರೀತಿ ಹಿಂಸಾಚಾರಗಳು ನಡೀಬಾರ್ದು ಅಂತ ಸೂಕ್ತ ಕ್ರಮಗಳನ್ನ ತೆಗೆದ್ಕೊಳ್ಳಲಾಗ್ತಿದೆ. ಅಂದ್ಹಾಗೆ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ರಾಜಿನಾಮೆ ನೀಡಿ, ಉಸ್ತುವಾರಿ ಸರ್ಕಾರಕ್ಕೆ ಅಧಿಕಾರ ನೀಡೋಕೆ ನಿರಾಕರಿಸಿದ್ರು. ಆದ್ರಿಂದ BNP ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದೆ.

-masthmagaa.com

Contact Us for Advertisement

Leave a Reply