ಬಾಂಗ್ಲಾದೇಶದ ಚಿತ್ತಗಾಂಗ್‌ ಬಂದರನ್ನ ಭಾರತ ಬಳ್ಸೋಕೆ ಒಪ್ಪಿದ ಪ್ರಧಾನಿ ಶೇಖ್‌ ಹಸೀನಾ!

masthmagaa.com:

ಬಾಂಗ್ಲಾದೇಶ ತನ್ನ ಚಿತ್ತಗಾಂಗ್‌ ಬಂದರನ್ನ ಭಾರತ ಬಳ್ಸೋಕೆ ಒಪ್ಪಿಗೆ ನೀಡಿದೆ. ಭಾರತದ ವಿದೇಶಾಂಗ ಸಚಿವ ಎಸ್‌ ಜಯ್‌ಶಂಕರ್‌ ಅವ್ರು ಗುರುವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವ್ರನ್ನ ಭೇಟಿ ಮಾಡಿದ್ರು. ಆವಾಗ ಪ್ರಧಾನಿ ಹಸೀನಾ ಅವ್ರು ನೆರೆಹೊರೆ ದೇಶಗಳ ನಡುವಿನ ಸಂಪರ್ಕದ ಪ್ರಾಮುಖ್ಯತೆಯನ್ನ ಒತ್ತಿ ಹೇಳಿದ್ರು. ಜೊತೆಗೆ ಅವ್ರ ದೇಶದ ಪ್ರಮುಖ ಬಂದರನ್ನ ಭಾರತದ ಭೂ ಆವೃತ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳ ಬಳಕೆಗೆ ನೀಡಿದ್ರು. ಇನ್ನು ಈ ಭೇಟಿಯ ಬಗ್ಗೆ ಜಯಶಂಕರ್‌ ಅವ್ರು ಟ್ವೀಟ್‌ ಮಾಡಿದ್ರು. ಅದ್ರಲ್ಲಿ ಪ್ರಧಾನಿ ಹಸೀನಾ ಅವ್ರ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದಗಳನ್ನ ತಿಳಿಸಿದ್ರು. ಹಾಗೂ ಪ್ರಧಾನಿ ಮೋದಿಯವ್ರ ವೈಯಕ್ತಿಕ ಶುಭಾಶಯಗಳನ್ನ ತಿಳಿಸಿದ್ದಾಗಿ ಹೇಳಿದ್ರು. ಜೊತೆಗೆ ನಮ್ಮ ದ್ವಿಪಕ್ಷೀಯ ಸಂಬಂಧಗಳು ಇಬ್ರು ನಾಯಕರ ಮಾರ್ಗದರ್ಶನದಲ್ಲಿ ಇನ್ನಷ್ಟು ಗಟ್ಟಿಯಾಗ್ತಿದೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply