ಬಾಂಗ್ಲಾ ಹಡಗು ರಕ್ಷಿಸಿದ ಇಂಡಿಯನ್‌ ನೇವಿ! 23 ಮಂದಿ ಬಜಾವ್!

masthmagaa.com:

ಸೊಮಾಲಿಯಾ ಬಳಿ ಕಡಲ್ಗಳರ ದಾಳಿಗೆ ಒಳಗಾಗಿದ್ದ ಬಾಂಗ್ಲಾದೇಶದ ಹಡಗೊಂದನ್ನ ಇಂಡಿಯನ್‌ ನೇವಿ ರಕ್ಷಣೆ ಮಾಡಿದೆ. MV ಅಬ್ದುಲ್ಲಾ ಅನ್ನೋ ಬಲ್ಕ್‌ ಕ್ಯಾರಿಯರ್‌ ಹಡಗನ್ನ ಸೊಮಾಲಿಯಾದ ಪೈರೇಟ್‌ಗಳು ಹೈಜಾಕ್‌ ಮಾಡಿದ್ರು. ಈ ವೇಳೆ ಹಡಗಿನಲ್ಲಿದ್ದ ಸಿಬ್ಬಂದಿ SOS ಅಂದ್ರೆ ʻSave Our Ship’ ಕಾಲ್‌ ಮಾಡಿದ್ದಾರೆ. ಕೂಡಲೇ ಇದಕ್ಕೆ ರೆಸ್ಪಾಂಡ್‌ ಮಾಡಿದ ಇಂಡಿಯನ್‌ ನೇವಿ ತನ್ನ ಲಾಂಗ್‌ ರೇಂಜ್‌ ಮಾರಿಟೈಮ್‌ ಪಾಟ್ರೋಲ್‌ (LRMP) ಏರ್‌ಕ್ರಾಫ್ಟ್‌ನ್ನ ನೆರವಿಗೆ ಕಳಿಸಿದೆ. ಆ ಮೂಲಕ ಹಡಗನ್ನ ಹೈಜಾಕ್‌ ಮಾಡಿದ್ದ 15-20 ಕಡಲ್ಗಳ್ಳರನ್ನ ಓಡಿಸಲಾಗಿದೆ. ನಂತರ ಇಂಡಿಯನ್‌ ನೇವಿಯ ವಾರ್‌ಶಿಪ್‌ ಒಂದನ್ನ MV ಅಬ್ದುಲ್ಲಾ ಬಳಿ ನಿಯೋಜಿಸಲಾಗಿದೆ. ಹೈಜಾಕ್‌ ಆಗಿದ್ದ MV ಅಬ್ದುಲ್ಲಾ, 55 ಸಾವಿರ ಟನ್‌ ಕಲ್ಲಿದ್ದಲು ಹೊತ್ತು ಮೊಜಾಂಬಿಕ್‌ನಿಂದ UAEಗೆ ಹೋಗ್ತಿತ್ತು. ಅದ್ರಲ್ಲಿದ್ದ 23 ಮಂದಿ ಸಿಬ್ಬಂದಿ ಕೂಡ ಬಾಂಗ್ಲಾದೇಶಿ ಮೂಲದವರು.

-masthmagaa.com

Contact Us for Advertisement

Leave a Reply