ಬಿಬಿಸಿಯ ಗುಜರಾತ್‌ ಗಲಭೆ ವರದಿ ವಿಚಾರ! ಮೋದಿ ಪರ ರಿಷಿ ಸುನಾಕ್‌ ಬ್ಯಾಟಿಂಗ್!

masthmagaa.com:

ಪ್ರಧಾನಿ ನರೇಂದ್ರ ಮೋದಿ ಅವ್ರ ಕುರಿತು BBC ಪ್ರಕಟಿಸಿರೋ ಡಾಕ್ಯುಮೆಂಟರಿ ಸಿರೀಸ್‌ ಈಗ ದೊಡ್ಡ ವಿವಾದ ಸೃಷ್ಟಿಸಿದೆ. ಕೋಲಾಹಲಕ್ಕೆ ಕಾರಣವಾಗಿದೆ. India: The Modi Question ಅನ್ನೋ ಈ ಡಾಕ್ಯುಮೆಂಟರಿ ಸಿರೀಸ್‌ನ ಫಸ್ಟ್‌ ಪಾರ್ಟ್‌ನಲ್ಲಿ 2002ರ ʻಗುಜರಾತ್‌ ಗಲಭೆʼಗೆ ಅಂದು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವ್ರೇ ನೇರ ಹೊಣೆ ಅಂತ ಉಲ್ಲೇಖಿಸಲಾಗಿದೆ. ಇದ್ರಲ್ಲಿ ಗುಜರಾತ್‌ ಗಲಭೆಯ ನಂತ್ರ ಬ್ರಿಟನ್‌ ಸರ್ಕಾರ ನಡೆಸಿದ ಒಂದು ತನಿಖೆಯ ರಿಪೋರ್ಟ್‌ನ್ನ ತೋರಿಸಲಾಗಿದ್ದು. ಅದ್ರ ಬಗ್ಗೆ ಮಾತಾಡ್ತಾ ಬ್ರಿಟನ್‌ನ ಮಾಜಿ ಫಾರೆನ್‌ ಸೆಕ್ರಟರಿ ಜಾಕ್‌ ಸ್ಟ್ರಾ, ನಾವು ನೇರವಾಗಿ ಗುಜರಾತ್‌ಗೆ ಒಂದು ಟೀಂ ಕಳಿಸಿ ತನಿಖೆಯನ್ನ ನಡೆಸಿದ್ವಿ. ತನಿಖೆಯ ವರದಿ ನೋಡಿ ನನಗೆ ಕಳವಳವಾಯ್ತು. ಅದ್ರಲ್ಲಿ ವರದಿಯಾಗಿದ್ದಕ್ಕಿಂತ ಹೆಚ್ಚಿನ ಸಾವು ನೋವು ಆಗಿದ್ವು ಅಂತ ಇತ್ತು ಅಂತ ಹೇಳಿದ್ದಾರೆ. ಇನ್ನು ಈ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂಧಮ್‌ ಬಗ್ಚಿ ಪ್ರತಿಕ್ರಿಯಿಸಿದ್ದು, ಬಿಬಿಸಿ ಡಾಕ್ಯುಮೆಂಟರಿ ಪ್ರೊಪಗಾಂಡಾ ಆಗಿದೆ. ಇದ್ರಲ್ಲಿ ಯಾವುದೇ ವಾಸ್ತವಿಕ ಸತ್ಯ ಇಲ್ಲ. ಭಾರತದಲ್ಲಿ ಇದು ಎಲ್ಲೂ ಸ್ಕ್ರೀನ್‌ ಆಗಿಲ್ಲ, ಹಾಗಾಗಿ ನಾವು ಹೆಚ್ಚು ಪ್ರತಿಕ್ರಿಯೆ ಕೊಡಲ್ಲ ಅಂತ ಹೇಳಿದ್ದಾರೆ. ಇನ್ನು ಅದ್ರಲ್ಲಿ ಬ್ರಿಟನ್‌ನ ಮಾಜಿ ವಿದೇಶಾಂಗ ಸಚಿವ ಮಾತಾಡಿರೊ ಬಗ್ಗೆ ಪ್ರತಿಕ್ರಿಯಿಸಿ, ಅವ್ರು ಯಾವುದೊ ಬ್ರಿಟನ್‌ನ ಇಂಟರ್ನಲ್‌ ರಿಪೋರ್ಟ್‌ ಬಗ್ಗೆ ಮಾತಾಡ್ತಿರೋ ರೀತಿ ಕಾಣ್ತಿದೆ. 20 ವರ್ಷದ ಹಿಂದಿನ ರಿಪೋರ್ಟ್‌ ಬಗ್ಗೆ ನಾನು ಹೇಗೆ ರಿಯಾಕ್ಟ್‌ ಮಾಡಲಿ. ಜಾಕ್‌ ಸ್ಟ್ರಾ ಮಾತಾಡಿದಾರೆ ಅಂದ ತಕ್ಷಣ ಅದು ಸತ್ಯ ಆಗಲ್ಲ. ಅದ್ರಲ್ಲಿ ಏನೋ ತನಿಖೆ, ವಿಚಾರಣೆ ಅಂತ ಮಾತಾಡಿದ್ದಾರೆ. ಅವ್ರೇನು ಇನ್ನು‌ ವಸಾಹತು ಮನಸ್ಥಿತಿಯಲ್ಲಿದ್ರಾ ಏನು ಭಾರತವನ್ನ ಆಳ್ತಿದ್ರಾ ಅಂತ ಪ್ರಶ್ನಿಸಿದ್ದಾರೆ. ಇನ್ನು ಈ ವಿಚಾರ ಬ್ರಿಟನ್‌ನ ಪಾರ್ಲಿಮೆಂಟ್‌ನಲ್ಲಿ ಕೂಡ ಪ್ರತಿಧ್ವನಿಸಿದ್ದು, ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್ ಬಿಬಿಸಿ ಡಾಕ್ಯುಮೆಂಟರಿ ವಿಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಾಕ್‌ ಮೂಲದ ಲೇಬರ್‌ ಸಂಸದ ಇಮ್ರಾನ್‌ ಹುಸೇನ್‌, ಗುಜರಾತ್‌ ಮಾರಣಹೋಮದಲ್ಲಿ ನರೇಂದ್ರ ಮೋದಿಯವ್ರ ಇನ್ವಾಲ್ವ್‌ಮೆಂಟ್‌ ಬಗ್ಗೆ ವಿದೇಶಾಂಗ ಇಲಾಖೆಗೆ ಗೊತ್ತಿತ್ತು ಅಂತ ಬಿಬಿಸಿ ಡಾಕ್ಯುಮೆಂಟರಿಯಲ್ಲಿ ಹೇಳಲಾಗಿದೆ. ಇದನ್ನ ನೀವು ಒಪ್ಪುತ್ತೀರಾ ಅಂತ ಕೇಳಿದ್ದಕ್ಕೆ, ರಿಷಿ ಸುನಾಕ್‌, ಈ ವಿಚಾರದಲ್ಲಿ ಬ್ರಿಟನ್‌ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ಬದಲಾಗಿಲ್ಲ. ಹೌದು ನಾವು ಶೋಷಣೆಯನ್ನ ಸಹಿಸಲ್ಲ, ಆದ್ರೆ ಮೋದಿಯವರನ್ನ ಇಲ್ಲಿ ಚಿತ್ರಿಸೋ ರೀತಿಯನ್ನ ಯಾವುದೇ ಕಾರಣಕ್ಕೂ ಒಪ್ಪಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply