200 ಬೀದಿಬದಿ ವ್ಯಾಪಾರಿಗಳ ಅಂಗಡಿ ತೆರವುಗೊಳಿಸಿದ BBMP! ಯಾಕೆ?

masthmagaa.com:

ಬೆಂಗಳೂರಿನ ಶಾಪಿಂಗ್‌ ಹಾಟ್‌ಸ್ಪಾಟ್‌ಗಳಲ್ಲಿ ಜೆಸಿಬಿ ಸದ್ದು ಮಾಡಿದ್ದು, ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಬೀದಿಬದಿ ವ್ಯಾಪಾರಿಗಳನ್ನ ತೆರವು ಮಾಡಲಾಗಿದೆ. ಫುಟ್​​ಪಾತ್​​ನಲ್ಲಿದ್ದ ಅಕ್ರಮ ಶೆಡ್​, ಬಟ್ಟೆ ಅಂಡಿಗಳನ್ನು BBMP ತೆರವುಗೊಳಿಸಿದೆ. ಅಂಗಡಿಗಳನ್ನ ತೆರವುಗೊಳಿಸಿರೋದಕ್ಕೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವ್ಯಾಪರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿರುವ BBMP ಉಸ್ತುವಾರಿ ಅಧಿಕಾರಿ ಸೋಮಶೇಖರ್​, ಸುಮಾರು 200 ಅನಧಿಕೃತ ಮಳಿಗೆಗಳನ್ನು ತೆಗೆದುಹಾಕಲಾಗಿದೆ. ಈ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದು, ಅವುಗಳನ್ನ ತೆರವು ಮಾಡಬೇಕು ಅಂತ ಆರು ತಿಂಗಳ ಹಿಂದೆ ಹೇಳಲಾಗಿತ್ತು. ಬಳಿಕ ಸುಮಾರು ಮೂರು ತಿಂಗಳ ಹಿಂದೆ ಮತ್ತೆ ಎಚ್ಚರಿಕೆ ನೀಡಿಲಾಗಿತ್ತು. ಇದೀಗ ತೆರವುಗೊಳಿಸಲಾಗಿದೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply