ನಿಧಾನಗತಿಯ ಓವರ್‌ರೇಟ್: ರಾಹುಲ್‌, ರುತುರಾಜ್‌ಗೆ ದಂಡ!

masthmagaa.com:

ಶುಕ್ರವಾರ ಐಪಿಎಲ್‌ನಲ್ಲಿ ಚೆನ್ನೈ ಮತ್ತು ಲಕ್ನೋ ತಂಡಗಳ ನಡುವೆ ಸ್ಲೋ ಓವರ್‌ರೇಟ್ ಮ್ಯಾಚ್‌ ನಡೆದಿದೆ ಅಂತೇಳಿ ಉಭಯ ತಂಡಗಳ ನಾಯಕರಿಗೆ ಬಿಸಿಸಿಐ ತಲಾ 12ಲಕ್ಷ ರೂಪಾಯಿ ದಂಡ ವಿಧಿಸಿದೆ. ಲಕ್ನೋನ ಅಟಲ್‌ ಬಿಹಾರಿ ವಾಜಪೇಯ್‌ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್‌ನಲ್ಲಿ ಉಭಯ ತಂಡಗಳು ಪಂದ್ಯದ ನಿಯಮ ಉಲ್ಲಂಘನೆ ಮಾಡಿ ನಿಧಾನಗತಿಯ ಬೌಲಿಂಗ್ ಮಾಡಿ ಸ್ಲೋ ಓವರ್‌ರೇಟ್‌ ಆಟ ಆಡಿವೆ ಅಂತ ಬಿಸಿಸಿಐ ಹೇಳಿಕೆ ರಿಲೀಸ್‌ ಮಾಡಿದೆ. ಹೀಗಾಗಿ ಲಕ್ನೋ ತಂಡದ ನಾಯಕ ಕೆ.ಎಲ್.ರಾಹುಲ್‌ ಹಾಗೂ ಚೆನ್ನೈ ಟೀಮ್‌ ಕ್ಯಾಪ್ಟನ್‌ ರುತುರಾಜ್‌ ಗಾಯಕ್‌ವಾಡ್‌ಗೆ ತಲಾ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಅಂತ ಬಿಸಿಸಿಐ ತಿಳಿಸಿದೆ.

-masthmagaa.com

Contact Us for Advertisement

Leave a Reply