ಐಪಿಎಲ್‌ ಆಡದ ರಿಷಬ್‌ ಪಂತ್‌ರಿಗೆ 16 ಕೋಟಿ ರೂಪಾಯಿ ನೀಡುತ್ತೆ ಬಿಸಿಸಿಐ! ಏಕೆ?

masthmagaa.com:

ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡಿತಿರೋ ಸ್ಟಾರ್ ಕ್ರಿಕೆಟರ್‌ ರಿಷಭ್‌ ಪಂತ್‌ಗೆ ಶಾಕಿಂಗ್‌ ಎದುರಾಗಿದೆ. ಅವರ ಆರೋಗ್ಯ ಸುಧಾರಿಸೋಕೆ ಸುಮಾರು 9 ತಿಂಗಳು ಬೇಕಾಗ್ಬೋದು ಅಂತ ವೈದ್ಯರು ಹೇಳಿದ್ದಾರೆ. ಆದ್ದರಿಂದ ಪಂತ್‌ ಐಪಿಎಲ್‌ ಸೇರಿದಂತೆ ಈ ವರ್ಷ ನಡೆಯುವ ಎಲ್ಲ ಕ್ರಿಕೆಟ್‌ ಸರಣಿಯಿಂದ ದೂರ ಉಳಿಯುವಂತಾಗಿದೆ. ಇನ್ನು ಈ ವರ್ಷ ನಡೆಯಲಿರೊ ಐಪಿಎಲ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಪಂತ್‌ರನ್ನ16 ಕೋಟಿ ರೂಪಾಯಿಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಈಗ ಪಂತ್‌ಗೆ ಟೂರ್ನಿಯಲ್ಲಿ ಆಡೋಕೆ ಸಾಧ್ಯವಾಗದ ಕಾರಣ ಹಣವನ್ನ ನೀಡುತ್ತೋ ಇಲ್ವೋ ಅನ್ನೋ ಪ್ರಶ್ನೆ ಎದ್ದಿತ್ತು. ಇದೀಗ ಆ ಹಣವನ್ನ ಫ್ರಾಂಚೈಸ್‌ ಬದ್ಲು ಬಿಸಿಸಿಐ ನೀಡಲಿದೆ ಅಂತ ಹೇಳಲಾಗಿದೆ. ಪಂತ್ ಈ ವರ್ಷ ಐಪಿಎಲ್‌ನಲ್ಲಿ ಆಡದಿದ್ದರೂ, ಐಪಿಎಲ್‌ನ 16 ಕೋಟಿ ರೂಪಾಯಿಗಳನ್ನ ದಿಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಬಿಸಿಸಿಐ ಸಂಪೂರ್ಣವಾಗಿ ಪಾವತಿಸಲಿದೆ. ಇದು ಮಾತ್ರವಲ್ಲದೆ, ಕೇಂದ್ರದ ಒಪ್ಪಂದದಡಿಯಲ್ಲಿ ಅವರು ಪಡೆದ ವಾರ್ಷಿಕ ರಿಟೈರ್‌ಮೆಂಟ್‌ಗೆ 5 ಕೋಟಿ ರೂಪಾಯಿಗಳನ್ನ ಸಹ ನೀಡುತ್ತದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply