ಚೀನಾ ಬಳಿ ಅಮೆರಿಕ ಭಿಕ್ಷೆ ಬೇಡುತ್ತಿದೆ ಅಂತ ಉತ್ತರ ಕೊರಿಯಾ! ಯಾಕೆ?

masthmagaa.com:

ಅಮೆರಿಕದ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಥನಿ ಬ್ಲಿಂಕನ್‌ ಅವ್ರ ಇತ್ತೀಚಿನ ಚೀನಾ ಭೇಟಿಯನ್ನ ʻಭಿಕ್ಷಾಟನೆ ಪ್ರವಾಸʼ ಅಂತ ಕರೆಯೋ ಮೂಲಕ ಉತ್ತರ ಕೊರಿಯಾ ಟೀಕಿಸಿದೆ. ಅಮೆರಿಕ ಹಾಗೂ ಚೀನಾ ನಡುವಿನ ಉದ್ವಿಗ್ನತೆಯನ್ನ ಸರಿಪಡಿಸೋಕೆ ಬೇಡಿಕೊಳ್ಳಲು ಅಮೆರಿಕ ಚೀನಾಗೆ ಭೇಟಿ ನೀಡಿತ್ತು. ಇನ್ನು ಚೀನಾ ಜೊತೆಗಿನ ಬಿಕ್ಕಟ್ಟು ಹೀಗೆ ಕಂಟಿನ್ಯೂ ಆದ್ರೆ ಅಮೆರಿಕದ ಆರ್ಥಿಕತೆ ಮೇಲೆ ದೊಡ್ಡ ಪೆಟ್ಟು ಬೀಳಲಿದೆ ಅಂತ ಅಮೆರಿಕ ಈ ಬೆಗ್ಗಿಂಗ್‌ ಟ್ರಿಪ್‌ ಕೈಗೊಂಡಿದೆ ಅಂತ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಜೊತೆಗೆ ಚೀನಾದ ಮೇಲೆ ಒತ್ತಡ ಹೇರುವ ಅಮೆರಿಕದ ನೀತಿ ವಿಫಲವಾಗಿರೋ ಕಾರಣಕ್ಕೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಬ್ಲಿಂಕನ್‌ ಚೀನಾಗೆ ಭೇಟಿ ನೀಡಿದ್ದಾರೆ ಅಂತ ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಚೀನಾವನ್ನ ವಿರೋಧಿಸೋ ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಜೊತೆಗಿನ QUAD ಗುಂಪು ಮತ್ತು ಬ್ರಿಟನ್ ಮತ್ತು ಆಸ್ಟ್ರೇಲಿಯಾದೊಂದಿಗೆ AUKUS ಒಪ್ಪಂದಗಳಿಂದ ಉಂಟಾಗಿರೋ ಪ್ರಾದೇಶಿಕ ಉದ್ವಿಗ್ನತೆಗೆ ಅಮೆರಿಕನೇ ಕಾರಣ ಅಂತ ಉತ್ತರ ಕೊರಿಯಾ ಆರೋಪಿಸಿದೆ.

-masthmagaa.com

Contact Us for Advertisement

Leave a Reply