ಅಮೆರಿಕಾ ನಮ್ಮನ್ನು ಕೆಣಕಬೇಡ: ಚೀನಾ

masthmagaa.com:

ದಕ್ಷಿಣ ಚೀನಾ ಸಮುದ್ರದ ವಾಯುಪ್ರದೇಶದಲ್ಲಿ ನಮ್ಮ ವಿಮಾನದ ಬಳಿ ಆಕ್ರಮಣಕಾರಿ ರೀತಿಯಲ್ಲಿ ಚೀನಾದ ಫೈಟರ್‌ ಜೆಟ್‌ ಪಾಸ್‌ ಆಗಿ ಹೋಗಿದೆ ಅಂತ ನಿನ್ನೆ ಅಮೆರಿಕ ಆರೋಪಿಸಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕ ನಮ್ಮನ್ನ ಪ್ರಚೋದಿಸುವ ಕೆಲಸ ಮಾಡ್ತಿದೆ ಅಂತ ಆರೋಪಿಸಿದೆ. ಚೀನಾದ ಮೇಲೆ ನಿರಂತರವಾಗಿ ಕಣ್ಗಾವಲು ಇಡಲು ಆಗಾಗ ಅಮೆರಿಕ ತನ್ನ ಹಡಗುಗಳನ್ನ ಹಾಗೂ ವಿಮಾನಗಳನ್ನ ಕಳಿಸೋದ್ರಿಂದ, ಚೀನಾದ ಸಾರ್ವಭೌಮತ್ವ ಮತ್ತು ಭದ್ರತೆಗೆ ಗಂಭೀರ ಹಾನಿ ಮಾಡುತ್ತೆ ಅಂತ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್ ಹೇಳಿದ್ದಾರೆ. ಇದೇ ವೇಳೆ ಈ ರೀತಿಯ ಪ್ರಚೋದನಕಾರಿ ಹಾಗೂ ಅಪಾಯಕಾರಿ ಚಟುವಟಿಕೆಗಳು ಸಮುದ್ರಗಳಲ್ಲಿ ಭದ್ರತಾ ಸಮಸ್ಯೆಗಳಿಗೆ ಕಾರಣವಾಗಿದೆ. ಅಲ್ದೆ ಈ ರೀತಿಯ ಅಪಾಯಕಾರಿ ಪ್ರಚೋದನೆಯನ್ನ ತಕ್ಷಣವೇ ನಿಲ್ಲಿಸ್ಬೇಕು ಅಂತ ಅಮೆರಿಕಗೆ ಕರೆ ನೀಡಿದ್ದಾರೆ. ಈ ಮೂಲಕ ಚೀನಾ ಸಮುದ್ರದ ಬಳಿ ನೀವು ಬಂದಿದ್ಕೇ ನಾವು ಆ ಥರ ನಡೆದುಕೊಂಡಿದ್ದು ಅಂತ ಪರೋಕ್ಷವಾಗಿ ಹೇಳಿರೊ ಹಾಗಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply