ಚಳಿಗಾಲದ ಅಧಿವೇಶನದಲ್ಲಿ 2022-23ನೇ ಸಾಲಿನ ಪೂರಕ ಬಜೆಟ್‌ ಮಂಡನೆ!

masthmagaa.com:

ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಸಿಎಂ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಪೂರಕ ಬಜೆಟ್‌ನ್ನ ಮಂಡಿಸಿದ್ದಾರೆ. 8,001.13 ಕೋಟಿ ರೂಪಾಯಿ ಅಂದಾಜಿನ ಈ ಪೂರಕ ಬಜೆಟ್‌ನಲ್ಲಿ ಪ್ರಮುಖವಾಗಿ ಡಿಸಾಸ್ಟರ್ ರೆಸ್ಪಾನ್ಸ್ ಫಂಡ್‌ಗೆ 1,396 ಕೋಟಿ ರೂ, ಮನ್‌ರೇಗಾ ಯೋಜನೆಗೆ 750 ಕೋಟಿ ರೂ, ಇಂಧನ ಸೆಕ್ಟರ್​​ನಲ್ಲಿ ಈಕ್ವಿಟಿ ಖರೀದಿಗೆ 500 ಕೋಟಿ ರೂ, ಜನರಲ್​ ಅಸೆಂಬ್ಲಿ ಚುನಾವಣೆಗೆ 300 ಕೋಟಿ ರೂ, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಸ್ಕೀಂಗೆ 256 ಕೋಟಿ ರೂ, ರೈಲ್ವೆ ಯೋಜನೆಗೆ 250 ಕೋಟಿ, ನೀರಾವರಿ ಯೋಜನೆಗೆ 200 ಕೋಟಿ, ಐದು ಮೆಗಾ ಹಾಸ್ಟೆಲ್​​ಗಳ ನಿರ್ಮಾಣಕ್ಕೆ 200 ಕೋಟಿ ರೂ ಹಾಗೂ ಬಿಬಿಎಂಪಿಗೆ ಎರಡು ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.

-masthmagaa.com

Contact Us for Advertisement

Leave a Reply