ಅದಾನಿ ಪೋರ್ಟ್ಸ್‌ ಬಿಡ್ಡಿಂಗ್‌ ಕ್ಯಾನ್ಸಲ್‌ ಮಾಡಿದ್ರಾ ಮಮತಾ ಬ್ಯಾನರ್ಜಿ?

masthmagaa.com:

ಪಶ್ಚಿಮ ಬಂಗಾಳದ ತಾಜಪುರ್ ಆಳ ಸಮುದ್ರ ಬಂದರು ವಿಚಾರವಾಗಿ ಅದಾನಿ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವೆ ಗೊಂದಲ ಉಂಟಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಬಂದರು ಡೆವಲಪ್‌ ಮಾಡೋಕೆ ಟೆಂಡರ್‌ ಕರೆಯಲಾಗಿತ್ತು. ಈ ವೇಳೆ ಅದಾನಿ ಪೋರ್ಟ್ಸ್‌ ಬಿಡ್ಡಿಂಗ್‌ನ್ನ ತನ್ನದಾಗಿಸಿಕೊಂಡಿತ್ತು. ಅಲ್ಲದೇ ಬಂಗಾಳ ಸರ್ಕಾರ ತಾತ್ವಿಕ ಒಪ್ಪಿಗೆ ಕೂಡ ನೀಡಿತ್ತು. ಆದ್ರೆ ಅದಾದ ನಂತ್ರ ಒಂದು ವರ್ಷವಾದ್ರು ಸಮ್ಮತಿ ಪತ್ರವನ್ನೇ ನೀಡಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಬಂಗಾಳ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವ್ರು, 25 ಸಾವಿರ ಕೋಟಿ ರೂಪಾಯಿ ಮೊತ್ತದ ತಾಜಪುರ್ ಆಳ ಸಮುದ್ರ ಬಂದರು ಟೆಂಡರ್ ಪ್ರಕ್ರಿಯೆಯನ್ನ ಸರ್ಕಾರ ಶೀಘ್ರವೇ ಮರು ಪ್ರಾರಂಭಿಸಲಿದೆ ಅಂತ ಹೇಳಿದ್ದಾರೆ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಆದ್ರೆ ಈ ಬಗ್ಗೆ ಅದಾನಿ ಪೋರ್ಟ್ಸ್‌ ಹಾಗೂ Special Economic Zone (APSEZ)ಗೆ ಬಂಗಾಳ ಸರ್ಕಾರದಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply