ಪ.ಬಂಗಾಳದಲ್ಲಿ 23,753 ಶಿಕ್ಷಕ, ಭೋಧಕೇತರರ ನೇಮಕಾತಿ ರದ್ದು!

masthmagaa.com:

ಪಶ್ಚಿಮ ಬಂಗಾಳದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಶಿಕ್ಷಕರ ನೇಮಕಾತಿ ಆದೇಶವನ್ನ ರದ್ದು ಗೊಳಿಸಿ ಅಂತ ಕಲ್ಕತ್ತಾ ಹೈ ಕೋರ್ಟ್ ಆದೇಶ ನೀಡಿದೆ. 2016ರಲ್ಲಿ ಪಶ್ಚಿಮ ಬಂಗಾಳದಲ್ಲಿ ಒಟ್ಟು 23,753 ಶಿಕ್ಷಕರು ಹಾಗೂ ಭೋಧಕೇತರ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿತ್ತು. ಇದರಲ್ಲಿ ಅಕ್ರಮ ನಡೆದಿದೆ ಅಂತ ದೂರು ನೀಡಲಾಗಿತ್ತು. ರಾಜಕೀಯವಾಗಿ ಕೂಡ ಇದು ಸಾಕಷ್ಟು ಸುದ್ದಿ ಮಾಡಿತ್ತು. ಬಿಜೆಪಿ ಮತ್ತು ಟಿಎಂಸಿಗಳು ಪರಸ್ಪರ ವಾಗ್ಯುದ್ದ ಮಾಡ್ಕೊಂಡಿದ್ವು. ಮಮತಾ ಸಂಪುಟದ ಸಚಿವರೇ ಇದರಲ್ಲಿ ಲಾಕ್‌ ಆಗಿದ್ರು.ಈಗ ಅದರಲ್ಲಿ ಅಕ್ರಮ ಆಗಿದೆ. ಆ ನೇಮಕಾತಿ ಆದೇಶವನ್ನ ರದ್ದು ಗೊಳಿಸಿ ಅಂತ ಕೋರ್ಟ್‌ ತಿಳಿಸಿದೆ. ಜೊತೆಗೆ ನೇಮಕ ಗೊಂಡಿದ್ದವ್ರು ಬಡ್ಡಿ ಸಮೇತ ತಮ್ಮ ಸಂಬಳವನ್ನ ಕೋರ್ಟ್‌ಗೆ ನೀಡ್ಬೇಕು. 15 ದಿನಗಳ ಒಳಗೆ ಹೊಸ ನೇಮಕಾತಿ ನಡೆಸಬೇಕು ಅಂತ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply