ಇನ್ಮುಂದೆ ಬೆಳಗಾವಿಗೂ ಬರಲಿದೆ ಬೆಂಗಳೂರು-ಧಾರವಾಡ ‘ವಂದೇ ಭಾರತ್’ ರೈಲು!

masthmagaa.com:

ಬೆಳಗಾವಿ ಜನರ ಬಹು ದಿನಗಳ ಕನಸಾಗಿದ್ದ ವಂದೇ ಭಾರತ್ ರೈಲನ್ನ ಬೆಳಗಾವಿವರೆಗೂ ವಿಸ್ತರಣೆ ಮಾಡೋಕೆ ನೈರುತ್ಯ ರೈಲ್ವೇ ಇಲಾಖೆ ಒಪ್ಪಿಗೆ ಸೂಚಿಸಿದೆ. ಕೇವಲ 7 ಗಂಟೆ 45 ನಿಮಿಷದಲ್ಲಿ ಬೆಂಗಳೂರಿನಿಂದ ಬೆಳಗಾವಿ ತಲುಪುವ ಅತಿ ವೇಗದ ರೈಲು ಇದಾಗಿದೆ. ಅಂದ್ರೆ ಬೇರೆ ಟ್ರೇನ್‌ಗಳಿಗೆ ಹೋಲಿಸಿದ್ರೆ 2 ಗಂಟೆ ಮುಂಚೆನೇ ಇದು ಬೆಳಗಾವಿ ತಲುಪುತ್ತೆ. ಇದರಿಂದ ಉತ್ತರ ಕರ್ನಾಟಕದ ಗಡಿ ಭಾಗ, ಮಹಾರಾಷ್ಟ್ರ, ಗೋವಾಗಳಿಂದ ಬೆಂಗಳೂರಿಗೆ ಹೋಗಿ ಬರುವ ಸಾವಿರಾರು ಜನರಿಗೆ ಹೆಚ್ಚಿನ ಅನೂಕೂಲವಾಗಲಿದೆ. ನವೆಂಬರ್‌ ಅಂತ್ಯಕ್ಕೆ ಇದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಅಂದ್ಹಾಗೆ ಇದೇ ವರ್ಷ ಜೂನ್‌ 28ಕ್ಕೆ ಬೆಂಗಳೂರು-ಧಾರವಾಡ ವಂದೇ ಭಾರತ್‌ ರೈಲಿನ ಓಡಾಟ ಆರಂಭವಾಗಿತ್ತು.

-masthmagaa.com

Contact Us for Advertisement

Leave a Reply